ಭದ್ರಾವತಿಯಲ್ಲಿ ಆಯೋಜಿಸಲಾಗಿರುವ ವರ್ಷಾವಾಸ ಪ್ರವಚನ ಮಾಲಿಕೆ ಸಮಾರೋಪ ಸಮಾರಂಭ ಕುರಿತು ಪತ್ರಕರ್ತ, ಉಪಾಸಕ ಸುರೇಶ್ ಮಾಹಿತಿ ನೀಡಿದರು.
ಭದ್ರಾವತಿ : ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ(ಬಿಎಸ್‌ಐ) ಪುರುಷ ಮತ್ತು ಮಹಿಳಾ ವಿಭಾಗದ ವತಿಯಿಂದ ವರ್ಷಾವಾಸ ಪ್ರವಚನ ಮಾಲಿಕೆ ಸಮಾರೋಪ ಸಮಾರಂಭ ನ.೨ರಂದು ನಗರದ ಹೊಸನಂಜಾಪುರದಲ್ಲಿರುವ ಬೌದ್ಧ ವಿಹಾರದಲ್ಲಿ ಆಯೋಜಿಸಲಾಗಿದೆ ಎಂದು ಪತ್ರಕರ್ತ, ಉಪಾಸಕ ಸುರೇಶ್ ತಿಳಿಸಿದರು.
ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೌದ್ಧ ಧರ್ಮದ ಕಮಲ ರತ್ನ ಭಂತೇಜಿ, ಬಳ್ಳಾರಿ ಮತ್ತು ಧಮ್ಮವೀರ ಭಂತೇಜಿ, ರೈಲ್ವೆ ಎಂಪ್ಲಾಯಿಸ್ ಬುದ್ದ ವಿಹಾರ, ಹುಬ್ಬಳ್ಳಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಉಪಾಸಕ ಸುರೇಶ್ ಅಧ್ಯಕ್ಷತೆ ವಹಿಸಲಿದ್ದು, ಬೆಂಳೂರಿನ ಧಮ್ಮ ಚಿಂತಕ ಶಿವರುದ್ರಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ಬಿಎಸ್‌ಐ ದಕ್ಷಿಣ ಉಪಾಧ್ಯಕ್ಷ ಮಹೇಂದ್ರ ಮಂಕಳೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಮಾಲೂರು ಧಮ್ಮ ಚಿಂತಕಿ ಸಿ.ವೈ ರಾಧ, ಟಿನರಸೀಪುರ ಧಮ್ಮಾಚಾರಿ ಕೆ.ಎನ್ ಪ್ರಭುಸ್ವಾಮಿ, ಸಂಬುದ್ಧ ಧರ್ಮಾಂಕುರ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್, ಡಿಎಸ್‌ಎಸ್ ಮುಖಂಡ ಸತ್ಯ ಭದ್ರಾವತಿ, ಸಿದ್ದಾರ್ಥ ಅಂಧರ ಕೇಂದ್ರ, ಅಧ್ಯಕ್ಷ ಶಿವಬಸಪ್ಪ, ಉಪಾಸಕ ರಾಜಶೇಖರ್, ತಮಿಳು ಆದಿ ದ್ರಾವಿಡ ಹಿತ ರಕ್ಷಣಾ ಸಮಿತಿ ನಿತ್ಯಾನಂದ, ವಿಜಯಪುರ ಡಿಎಸ್‌ಎಸ್ ಮುಖಂಡ ಮರಿಯಪ್ಪ ಹೆಬ್ಬಾಳ, ಮಂಗಳೂರಿನ ಬೌದ್ಧ ಉಪಾಸಕ ರಾಜಶೇಖರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬೌದ್ಧ ಉಪಾಸಕ ಮತ್ತು ಉಪಾಸಕಿಯರಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ