ಭದ್ರಾವತಿ : ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೧೦೦ನೇ ಜನ್ಮದಿನೋತ್ಸವದ ಅಂಗವಾಗಿ ಪುಟ್ಟಪರ್ತಿಗೆ ಪ್ರೇಮಯಾತ್ರೆ ಆಯೋಜಿಸಲಾಗಿದೆ.
ನ.೧೩ರಂದು ರಾತ್ರಿ ೧೦ ಗಂಟೆಗೆ ನಗರದಿಂದ ಪ್ರಯಾಣ ಬೆಳೆಸಲಿದ್ದು, ನ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಪುಟ್ಟಪರ್ತಿಯಿಂದ ಹೊರಟು ರಾತ್ರಿ ೮ ಗಂಟೆಗೆ ನಗರಕ್ಕೆ ಹಿಂದಿರುಗಲಾಗುವುದು. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ೯೧೪೧೬೪೨೪೩೨ ಅಥವಾ ೭೩೫೩೨೯೨೩೩೯ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕ ಜಿ.ಪಿ ಪರಮೇಶ್ವರಪ್ಪ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ