ಕಾರ್ಖಾನೆ ಯಂತ್ರೋಪಕರಣಗಳ ಕುರಿತು ತಂತ್ರಜ್ಞರಿಂದ ಮಾಹಿತಿ
ಮಹಾರಾಷ್ಟ್ರ ಕೊಲ್ಲಾಹಪುರದ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ೩೨ ವಿದ್ಯಾರ್ಥಿಗಳ ತಂಡ ಶೈಕ್ಷಣಿಕ ಮಾಹಿತಿಗಾಗಿ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿತು. ಕಾರ್ಖಾನೆ ಯಂತ್ರೋಪಕರಣಗಳ ಕುರಿತು ತಂತ್ರಜ್ಞರಿಂದ ಮಾಹಿತಿ ಪಡೆದು ಸಂವಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.
ಭದ್ರಾವತಿ: ಮಹಾರಾಷ್ಟ್ರ ಕೊಲ್ಲಾಹಪುರದ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ೩೨ ವಿದ್ಯಾರ್ಥಿಗಳ ತಂಡ ಶೈಕ್ಷಣಿಕ ಮಾಹಿತಿಗಾಗಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿತು.
ವಿದ್ಯಾರ್ಥಿಗಳು ಕೈಗಾರಿಕೆಗಳ ಕುರಿತು ಸಂವಹನ ಕಾರ್ಯಕ್ರಮದ ಭಾಗವಾಗಿ ಪ್ರೈಮರಿಮಿಲ್, ಬಾರ್ ಮಿಲ್, ಹೀಟ್ ಟ್ರೀಟ್‌ಮೆಂಟ್ ಶಾಪ್, ಫೋರ್ಜ್ ಪ್ಲಾಂಟ್ ಮತ್ತು ಮಿಶಿನ್ ಶಾಪ್ ಭೇಟಿನೀಡಿ ತಂತ್ರಜ್ಞರಿಂದ ಮಾಹಿತಿ ಪಡೆದರು. ನಂತರ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು.
ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕಾರ್ಖಾನೆ ಯಂತ್ರೋಪಕರಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವ ಜೊತೆಗೆ ಮಾಹಿತಿ ನೀಡಿದ ಹಾಗು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಕಾರ್ಖಾನೆ ಆಡಳಿತ ಮಂಡಳಿ ಹಾಗು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ