ಜಗದ್ಗುರು ಶ್ರೀಮನ್ಮದ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀಉತ್ತರಾದಿಮಠದಿಂದ ನ.೯ರವರೆಗೆ ಒಟ್ಟು ೭ ದಿನಗಳ ಕಾಲ ಅನೇಕ ಮಾಧ್ವಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ಭದ್ರಾವತಿ ನಗರದಲ್ಲಿ ಆಯೋಜಿಸಲಾಗಿರುವ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರಿಂದ ೧೩ನೇ ಶ್ರೀಮನ್ನ್ಯಾಯಸುಧಾಮಂಗಳಮಹೋತ್ಸವ ಹಾಗೂ ಸುಧಾಮಂಡನಾಚಾರ್ಯರಾದ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ ನಡೆಯಿತು.
ಭದ್ರಾವತಿ: ಜಗದ್ಗುರು ಶ್ರೀಮನ್ಮದ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀಉತ್ತರಾದಿಮಠದಿಂದ ನ.೯ರವರೆಗೆ ಒಟ್ಟು ೭ ದಿನಗಳ ಕಾಲ ಅನೇಕ ಮಾಧ್ವಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ನಗರದಲ್ಲಿ ಆಯೋಜಿಸಲಾಗಿರುವ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರಿಂದ ೧೩ನೇ ಶ್ರೀಮನ್ನ್ಯಾಯಸುಧಾಮಂಗಳಮಹೋತ್ಸವ ಹಾಗೂ ಸುಧಾಮಂಡನಾಚಾರ್ಯರಾದ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ ನಡೆಯಿತು.
ಜನ್ನಾಪುರ ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಜಯಶ್ರೀ ವೃತ್ತದ ಮಹಿಳಾ ಸಮಾಜದ ಆವರಣದಲ್ಲಿ ಕಾರ್ಯಕ್ರಮಗಳು ಜರುಗುತ್ತಿದ್ದು, ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರಿಂದ ಪಾದುಕಾ ಮಹಾಸಮರಾಧನೆ ನೆರವೇರಿತು.
ಬೆಳಿಗ್ಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ ಹಾಗು ಉಪಸ್ಥಿತ ಪೀಠಾಧಿಪತಿಗಳಿಂದ ಸಂಸ್ಥಾನ ಪೂಜೆ, ಪರೀಕ್ಷಾ ಹಾಗು ಅನುವಾದ ಮತ್ತು ಮಧ್ಯಾಹ್ನ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಶ್ರೀಸತ್ಯಪ್ರಮೋದತೀರ್ಥರು-ಜೀವನ ಮತ್ತು ಸಾಧನೆ, ಶ್ರೀಸತ್ಯಪ್ರಮೋದತೀರ್ಥರ ಶಿಷ್ಯವಾತ್ಸಲ್ಯ ವಿಶೇಷ ಉಪನ್ಯಾಸಗಳು ಜರುಗಿದವು. ಶಿರೂರು ಮಠದ ಶ್ರೀ ವೇದವರ್ಧನತೀರ್ಥರು ಮತ್ತು ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು ಹಾಗು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ದಿವ್ಯ ಸಾನಿಧ್ಯವಹಿಸಿ ಅನುಗ್ರಹಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ