ವಿಶ್ವೇಶತೀರ್ಥ ಶ್ರೀಗಳು, ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನೆ ಮಹೋತ್ಸವ
ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಸೋಮವಾರ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹಾಗೂ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನೆ ಮೊಹೋತ್ಸವ ಜರಗಿತು.
ಭದ್ರಾವತಿ : ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಸೋಮವಾರ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹಾಗೂ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನೆ ಮೊಹೋತ್ಸವ ಜರಗಿತು.
ಬೆಳಗಿನ ಜಾವ ೪.೩೦ಕ್ಕೆ ಪುರುಷ ಸೂಕ್ತ, ಶ್ರೀ ಸೂಕ್ತ ಹೋಮ, ತದನಂತರ ೭೫ ಕಳಸದೊಂದಿಗೆ ಶ್ರೀ ವೀರಾಂಜನೇಯ, ಶ್ರೀ ಜಯತೀರ್ಥರು, ಶ್ರೀ ವಾದಿರಾಜರು, ಶ್ರೀ ರಾಘವೇಂದ್ರ ಸ್ವಾಮಿ ಮತ್ತು ಶ್ರೀ ಭೂತರಾಜರಿಗೆ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್‌ರವರ ನೇತೃತ್ವದಲ್ಲಿ ಅಭಿಷೇಕ ಜರುಗಿತು.
ಮಂಗಳವಾದ್ಯ ಹಾಗು ಭಜನಾಮಂಡಳಿಗಳೊಂದಿಗೆ ವಿಶ್ವೇಶತೀರ್ಥ ಶ್ರೀಗಳು ಹಾಗೂ ಶ್ರೀ ವಿದ್ಯಾಮಾನ್ಯ ತೀರ್ಥರ ಭಾವಚಿತ್ರ ಹಾಗು ಪಾದುಕೆಯನ್ನು ರಾಘವೇಂದ್ರ ಸ್ವಾಮಿಗಳವರ ಮಠದಿಂದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.
ಪಂಡಿತರಾದ ಮೃಥಿಕ ಗುರುರಾಜ ಆಚಾರ್, ವಿಶ್ವೇಶತೀರ್ಥ ಶ್ರೀಗಳು ಹಾಗೂ ಶ್ರೀ ವಿದ್ಯಾಮಾನ್ಯ ತೀರ್ಥರ ಕುರಿತು ಪ್ರವಚನ ನಡೆಸಿಕೊಟ್ಟರು. ಹನುಮಂತ ರಾವ್ ಹಾಗೂ ರಾಘವೇಂದ್ರ ಆಚಾರ್ ಹಿಂದಿನಿಂದ ನಡೆದು ಬಂದ ದಾರಿಯನ್ನು ವಿವರಿಸಿದರು.
ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರುಳಿಧರ್ ತಂತ್ರಿ, ಉಪಾಧ್ಯಕ್ಷರಾದ ಸುಮ ರಾಘವೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ, ಖಜಾಂಚಿ ನಿರಂಜನ ಆಚಾರ್, ಶ್ರೀನಿವಾಸಚಾರ್, ವಿದ್ಯಾನಂದ ನಾಯಕ, ಕೆ.ಎಸ್ ಸುಧೀಂದ್ರ, ಮಾಧ್ವ ಮಂಡಳಿ ಅಧ್ಯಕ್ಷ ಜಯತೀರ್ಥ, ಶುಭ ಗುರುರಾಜ್, ಸುಪ್ರಿತ ತಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರದ ವಿವಿಧೆಡೆಗಳಿಂದ ಭಕ್ತರು ಭಾಗವಹಿಸಿದ್ದರು.