೫೪ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವಕ್ಕೆ ಚಾಲನೆ : ಡಿ.೨೭ರಂದು ಅನ್ನಸಂತರ್ಪಣೆ, ರಾಜಬೀದಿ ಉತ್ಸವ ಮೆರವಣೆಗೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರದ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ೫೪ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ೩ ದಿನಗಳವರೆಗೆ ಡಿ.೨೭ರವರೆಗೆ ಹಮ್ಮಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ೫೪ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ೩ ದಿನಗಳವರೆಗೆ ಡಿ.೨೭ರವರೆಗೆ ಹಮ್ಮಿಕೊಳ್ಳಲಾಗಿದೆ. 
    ಗುರುವಾರ ನಿರ್ಮಾಲ್ಯದರ್ಶನಂ, ಮಹಾಗಣಪತಿ ಹಾಗು ಸುದರ್ಶನ ಹೋಮ, ಉಷ ಪೂಜೆ, ಅಷ್ಟಾಭಿಷೇಕ, ಕಳಸ ಪೂಜೆ, ಕಳಸಾಭಿಷೇಕ ನಂತರ ಧ್ವಜಾರೋಹಣದೊಂದಿಗೆ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನದ ಪೂಜೆ, ಮಹಾಮಂಗಳಾರತಿ ನೆರವೇರಿತು. ಹೋಮ-ಹವನಗಳು ಶಿವಮೊಗ್ಗ ವೇದಬ್ರಹ್ಮ ಶ್ರೀ ಚಂದ್ರಶೇಖರ ಉಡುಪ ಮತ್ತು ಸಂಗಡಿಗರ ನೇತೃತ್ವದಲ್ಲಿ ಜರುಗಿದವು. ಸಂಜೆ ಅಲಂಕಾರ ದೀಪಾರಾಧನೆ, ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. 
    ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್. ಜಯಕೃಷ್ಣ, ಜೀರ್ಣೋದ್ದಾರ ಸಮಿತಿಯ ಛೇರ್ಮನ್ ವಿ. ಬಾಬು, ಅಧ್ಯಕ್ಷ ಟಿ.ಪಿ ಸುಬ್ರಮಣ್ಯನ್, ಉಪಾಧ್ಯಕ್ಷ ಆರ್. ರಾಧಕೃಷ್ಣನ್, ಕಾರ್ಯದರ್ಶಿ ಎಂ. ಅನಿಲ್‌ಕುಮಾರ್, ಸಹ ಕಾರ್ಯದರ್ಶಿ ರಾಮ ಮೊಗವೀರ, ಖಜಾಂಚಿ ಎ. ಚಂದ್ರಶೇಖರ್, ಲೆಕ್ಕ ಪರಿಶೋಧಕ ಶೇಖ್ಯಾನಾಯ್ಕ, ಸದಸ್ಯರಾದ ಪ್ರಭಾಕರನ್, ಶ್ಯಾಮಲ್ ಕುಮಾರ್, ರಾಜು ಕುಟ್ಟಿ, ವಿ. ಹರೀಶ್, ರೂಪೇಶ್ ಕುಮಾರ್, ವಿಶ್ವನಾಥ್, ಸುರೇಶ್, ಕೇರಳ ಸಮಾಜಂ ಯೂತ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಪ್ರಸನ್ನ ಕುಮಾರ್, ಉಪಾಧ್ಯಕ್ಷರಾದ ಆರ್. ಮಿಥುರ್ ಕುಮಾರ್, ಕೆ.ಎಸ್ ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಅಪ್ಪು, ಕಾರ್ಯದರ್ಶಿ ವಿ. ಹರೀಶ್, ಖಜಾಂಚಿ ಎಂ.ಕೆ ಶರವಣ, ಸಲಹೆಗಾರ ಎಂ.ಜೆ ವಿಜಯ್ ಸುಬ್ರಮಣ್ಯ, ಸದಸ್ಯರಾದ ರಜೇಶ್, ಸಂಜಯ್ ರಿತ್, ಅಜೇಶ್ ಕುಟ್ಟಿ, ಸುಧೀರ್, ಪ್ರದೀಪ್, ಕೆ.ಸಿ ವಿನಯ್, ಪ್ರದೀಪ್ ಕುಮಾರ್, ಎಸ್. ಪ್ರಹಲ್ಲಾದ್, ರಾಘವೇಂದ್ರ, ಅಜೀತ್, ಶಿವು,  ಪ್ರಮುಖರಾದ ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್, ಜಿ. ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಡಿ.೨೭ರಂದು ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಹಾಗು ಧ್ರುವ ತಂಡದವರಿಂದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಹಾಗು ಸಂಜೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸೇವಾ ಸಮಿತಿ ಕೋರಿದೆ.