ಪ್ರೇಕ್ಷಕರ ಮನಸೂರೆಗೊಂಡ `ಕೊಡಲ್ಲ ಅಂದ್ರ ಕೊಡಲ್ಲ...' ನಾಟಕ ಪ್ರದರ್ಶನ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಸಹಯೋಗದೊಂದಿಗೆ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಭದ್ರಾವತಿ ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿರ್ದಿಗಂತ ಮೈಸೂರು ಕಲಾವಿದರು ಅಭಿನಯಿಸಿದ ಶಕೀಲ್ ಅಹಮದ್ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದ `ಕೊಡಲ್ಲ ಅಂದ್ರ ಕೊಡಲ್ಲ...' ನಾಟಕ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.
ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಸಹಯೋಗದೊಂದಿಗೆ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿರ್ದಿಗಂತ ಮೈಸೂರು ಕಲಾವಿದರು ಅಭಿನಯಿಸಿದ ಶಕೀಲ್ ಅಹಮದ್ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದ `ಕೊಡಲ್ಲ ಅಂದ್ರ ಕೊಡಲ್ಲ...' ನಾಟಕ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.
ನಿರ್ದಿಗಂತ ಮೈಸೂರು ಕಲಾವಿದರಾದ ಜಿ. ದಿನೇಶನಾಯ್ಕ, ಸಲ್ಮಾ ದಂಡಿನ್, ಚರಿತ್ ಸುವರ್ಣ, ಮಂಜುನಾಥ ಮಂಡಲಗೇರಿ, ಚರಿತ ಶಾರದ, ಆಸೀಫ್ ಹೂವಿನ ಹಡಗಲಿ ಮತ್ತು ಕಲ್ಲಪ್ಪ ಪೂಜೇರ್‌ರವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು.
ಆರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ರಾಜ್ಯ ಪರಿಷತ್ ಸದಸ್ಯ ಡಾ. ಎಂ. ವೆಂಕಟೇಶ್, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಸ್.ಪಿ ರಾಕೇಶ್ ಕುಮಾರ್,
ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾತಂಡದ ಪ್ರಧಾನ ಕಾರ್ಯದರ್ಶಿ, ಕಲಾವಿದ ತಮಟೆ ಜಗದೀಶ್ , ಹಿರಿಯ ರಂಗ ಕಲಾವಿದ ಕೆ.ಎಸ್ ರವಿಕುಮಾರ್, ಜಾನಪದ ಕಲಾವಿದರಾದ ಜಿ. ದಿವಾಕರ, ಟಿ. ರಘುನಾಯ್ಕ, ಬಿ. ಷಣ್ಮುಖಪ್ಪ, ಬಿ. ಪ್ರವೀಣ್ ಕುಮಾರ್, ವೈ.ಕೆ ಹನುಮಂತಯ್ಯ, ಚಿದಾನಂದ ಮತ್ತು ಬಿ.ಎಚ್ ಗಿರಿಧರರ್ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
.jpg)