ಎಂ.ಪಿ ಸತ್ಯನಾರಾಯಣ ನಿಧನ
ಎಂ.ಪಿ ಸತ್ಯನಾರಾಯಣ
ಭದ್ರಾವತಿ : ನಗರಸಭೆ ವ್ಯಾಪ್ತಿಯ ಡಾ. ರಾಜಕುಮಾರ್ ರಸ್ತೆ, ಚಾಮೇಗೌಡ ಏರಿಯಾ ನಿವಾಸಿ, ನ್ಯಾಯಬೆಲೆ ಅಂಗಡಿ ಸಹಾಯಕ ಎಂ.ಪಿ ಸತ್ಯನಾರಾಯಣ(೬೭) ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು.
೭ ಮಂದಿ ಸಹೋದರರು, ಓರ್ವ ಸಹೋದರಿ ಇದ್ದಾರೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಸತ್ಯನಾರಾಯಣ ನಗರದ ಹೊಸಮನೆ ಶಿವಾಜಿ ವೃತ್ತ ಸಮೀಪದ ಸುಪ್ರೀಂ ನ್ಯಾಯಬೆಲೆ ಅಂಗಡಿ ಹಾಗು ಡಾ. ರಾಜಕುಮಾರ್ ರಸ್ತೆ, ಶಂಕರ್ ಚಿತ್ರಮಂದಿರ ಬಳಿ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ೪೦ ವರ್ಷಗಳಿಂದ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಹಾಗು ತಾಲೂಕು ಅಧ್ಯಕ್ಷರು, ಮತ್ತು ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸ್ಥಳೀಯ ಮುಖಂಡರು, ಗಣ್ಯರು ಸತ್ಯನಾರಾಯಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.