ಮೆಸ್ಕಾಂ ನೌಕರರಿಗೆ ವೇತನ ವಿಳಂಬ : ಕಛೇರಿಗೆ ಬೀಗ ಜಡಿದು ಪ್ರತಿಭಟನೆ
ಕಂದಾಯ ಬಾಕಿ ಹಿನ್ನಲೆಯಲ್ಲಿ ವೇತನ ವಿಳಂಬ ಅಧಿಕಾರಿಗಳ ಸ್ಪಷ್ಟನೆ
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ(ಮೆಸ್ಕಾಂ) ನಿರ್ವಹಣೆ ವಿಭಾಗದ ನೌಕರರು ವೇತನ ವಿಳಂಬವಾದ ಹಿನ್ನಲೆಯಲ್ಲಿ ಬುಧವಾರ ಭದ್ರಾವತಿ ಜೆಪಿಎಸ್ ಕಾಲೋನಿ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಭದ್ರಾವತಿ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ(ಮೆಸ್ಕಾಂ) ನಿರ್ವಹಣೆ ಹಾಗು ಇತರೆ ವಿಭಾಗದ ನೌಕರರು ವೇತನ ವಿಳಂಬವಾದ ಹಿನ್ನಲೆಯಲ್ಲಿ ಬುಧವಾರ ಜೆಪಿಎಸ್ ಕಾಲೋನಿ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿ ತಿಂಗಳು ೩೦ರಂದು ವೇತನವಾಗುತ್ತಿದ್ದು, ಆದರೆ ಈ ತಿಂಗಳು ವೇತನವಾಗಿಲ್ಲ. ನೌಕರರಿಗೆ ವೇತನ ಮಂಜೂರಾಗಿದ್ದರು ಸಹ ನೌಕರರ ಖಾತೆಗೆ ಜಮಾ ಮಾಡದೆ ತಡೆ ಹಿಡಿಯಲಾಗಿದೆ. ವೇತನ ಏಕೆ ತಡೆ ಹಿಡಿಯಲಾಗಿದೆ ಎಂದು ನೌಕರರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ನಡುವೆ ಕಛೇರಿಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ವೇತನವಾಗಿದೆ. ಆದರೆ ನಿರ್ವಹಣೆ ವಿಭಾಗದ ನೌಕರರಿಗೆ ಏಕೆ ವೇತನ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕಂದಾಯ ಬಾಕಿ ಇರುವ ಕಾರಣ ವೇತನ ವಿಳಂಬವಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೀರಪ್ಪ, ಲೆಕ್ಕಾಧಿಕಾರಿ ಅಶ್ವಿನಿ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಆದರೆ ಇದರಿಂದ ಮತ್ತಷ್ಟು ಆಕ್ರೋಶಗೊಂಡ ನೌಕರರು ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ್ ಬಳ್ಳಾಪುರರವರು ಸ್ಥಳಕ್ಕೆ ಬಂದು ಸೂಕ್ತ ಉತ್ತರ ನೀಡುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು. ಸಂಜೆ ೬ರವರೆಗೂ ಪ್ರಕಾಶ್ ಬುಳ್ಳಾಪುರರವರು ಸ್ಥಳಕ್ಕೆ ಅಗಮಿಸಲಿಲ್ಲ. ನೌಕರರು ಪ್ರತಿಭಟನೆ ಮುಂದುವರೆಸಿದ್ದರು.
ನೌಕರರ ಸಂಘ ಹಾಗು ಎಸ್.ಸಿ/ಎಸ್.ಟಿ ನೌಕರರ ಸಂಘದ ಅಧ್ಯಕ್ಷರುಗಳಾದ ಸಿ. ಆನಂದ್ ಮತ್ತು ಗುರುಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡಿದ್ದು, ಸಂಘದ ಪದಾಧಿಕಾರಿಗಳು ಸೇರಿದಂತೆ ಸುಮಾರು ೧೦೦ಕ್ಕೂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಿರ್ವಹಣೆ ಹಾಗು ಇತರೆ ವಿಭಾಗದಲ್ಲಿ ಸುಮಾರು ೩೫೦ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
.jpeg)