ಅನ್ನಸಂತರ್ಪಣೆ, ರಾಜಬೀದಿ ಉತ್ಸವ ಮೆರವಣಿಗೆ : ೫೪ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಸಂಪನ್ನ

ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಭದ್ರಾವತಿ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ೫೪ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ೩ ದಿನಗಳವರೆಗೆ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರ ಗಣ್ಯರು ಅನ್ನಸಂತರ್ಪಣೆಗೆ ಚಾಲನೆ ನೀಡಿದರು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ೫೪ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ೩ ದಿನಗಳವರೆಗೆ ವಿಜೃಂಭಣೆಯಿಂದ ಜರುಗಿತು. 
    ಶನಿವಾರ ಬೆಳಿಗ್ಗೆ ನಿರ್ಮಾಲ್ಯದರ್ಶನಂ, ಮಹಾಗಣಪತಿ ಹೋಮ, ಅಷ್ಟಾಭಿಷೇಕ, ಶ್ರೀ ಅಯ್ಯಪ್ಪ ಸ್ವಾಮಿ ಹಾಗು ಶ್ರೀ ಭಗವತಿಗೆ ದೇವರಿಗೆ ಚಂದನಾಲಂಕಾರ ಹಾಗು ದೇವಸ್ಥಾನ ಎಲ್ಲಾ ದೇವರುಗಳಿಗೆ ಹೂವಿನ ಅಭಿಷೇಕ, ನಂತರ ಪೂಜೆ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಹೋಮ-ಹವನಗಳು ಶಿವಮೊಗ್ಗ ವೇದಬ್ರಹ್ಮ ಶ್ರೀ ಚಂದ್ರಶೇಖರ ಉಡುಪ ಮತ್ತು ಸಂಗಡಿಗರ ನೇತೃತ್ವದಲ್ಲಿ ಜರುಗಿದವು
    ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರ ಗಣ್ಯರು ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಧ್ರುವ ತಂಡದವರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು. ದಾನಿಗಳು ಹಾಗು ಸೇವಾಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಸಂಜೆ ಹಳೇನಗರದ ಪುರಾಣ ಪ್ರಸಿದ್ಧ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸ್ವಾಮಿ ದೇವಸ್ಥಾನ ದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೂ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕೇರಳ, ರಾಮನಾಟ್ಟುಕರದ ಟಿಡಿಪಿ ವೃಂದದವರಿಂದ ಚಂಡ್ಯೆವಾದ್ಯ ಗಮನ ಸೆಳೆಯಿತು.  
    ೫೪ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಆಚರಣಾ ಸಮಿತಿ ಛೇರ್‍ಮನ್ ರಾಮನ್ ಕುಟ್ಟಿ, ಉಪ ಛೇರ್‍ಮನ್ ಜಿ. ಸುರೇಶ್, ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್. ಜಯಕೃಷ್ಣ, ಜೀರ್ಣೋದ್ದಾರ ಸಮಿತಿಯ ಛೇರ್ಮನ್ ವಿ. ಬಾಬು, ಅಧ್ಯಕ್ಷ ಟಿ.ಪಿ ಸುಬ್ರಮಣ್ಯನ್, ಉಪಾಧ್ಯಕ್ಷ ಆರ್. ರಾಧಕೃಷ್ಣನ್, ಕಾರ್ಯದರ್ಶಿ ಎಂ. ಅನಿಲ್‌ಕುಮಾರ್, ಸಹ ಕಾರ್ಯದರ್ಶಿ ರಾಮ ಮೊಗವೀರ, ಖಜಾಂಚಿ ಎ. ಚಂದ್ರಶೇಖರ್, ಲೆಕ್ಕ ಪರಿಶೋಧಕ ಶೇಖ್ಯಾನಾಯ್ಕ, ಸದಸ್ಯರಾದ ಪ್ರಭಾಕರನ್, ಶ್ಯಾಮಲ್ ಕುಮಾರ್, ರಾಜು ಕುಟ್ಟಿ, ವಿ. ಹರೀಶ್, ರೂಪೇಶ್ ಕುಮಾರ್, ವಿಶ್ವನಾಥ್, ಸುರೇಶ್, ಕೇರಳ ಸಮಾಜಂ ಯೂತ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಪ್ರಸನ್ನ ಕುಮಾರ್, ಉಪಾಧ್ಯಕ್ಷರಾದ ಆರ್. ಮಿಥುರ್ ಕುಮಾರ್, ಕೆ.ಎಸ್ ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಅಪ್ಪು, ಕಾರ್ಯದರ್ಶಿ ವಿ. ಹರೀಶ್, ಖಜಾಂಚಿ ಎಂ.ಕೆ ಶರವಣ, ಸಲಹೆಗಾರ ಎಂ.ಜೆ ವಿಜಯ್ ಸುಬ್ರಮಣ್ಯ, ಸದಸ್ಯರಾದ ರಜೇಶ್, ಸಂಜಯ್ ರಿತ್, ಅಜೇಶ್ ಕುಟ್ಟಿ, ಸುಧೀರ್, ಪ್ರದೀಪ್, ಕೆ.ಸಿ ವಿನಯ್, ಪ್ರದೀಪ್ ಕುಮಾರ್, ಎಸ್. ಪ್ರಹಲ್ಲಾದ್, ರಾಘವೇಂದ್ರ, ಅಜೀತ್, ಶಿವು,  ಪ್ರಮುಖರಾದ ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್, ಯುವ ಮುಖಂಡ ಮಂಗೋಟೆ ರುದ್ರೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಗರಸಭೆ ಮಾಜಿ ಸದಸ್ಯ ಫ್ರಾನ್ಸಿಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.