ಬೊಲೆರೋ ವಾಹನ ಪಲ್ಟಿ : ಕೂಲಿಯಾಳು ಮಹಿಳೆ ಸಾವು
ಕೂಲಿಯಾಳುಗಳನ್ನು ಕರೆದೊಯ್ಯುತ್ತಿದ್ದ ಬೊಲೆರೊ ಪಿಕ್-ಅಪ್ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದ ಪರಿಣಾಮ ಕೂಲಿಯಾಳು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ಭದ್ರಾವತಿ ತಾಲೂಕಿನ ದೊಡ್ಡೇರಿ ರಸ್ತೆ ರಂಗನಾಥಪುರ ದೊಡ್ಡ ಚಾನಲ್ ಹತ್ತಿರ ನಡೆದಿದೆ.
ಭದ್ರಾವತಿ: ಕೂಲಿಯಾಳುಗಳನ್ನು ಕರೆದೊಯ್ಯುತ್ತಿದ್ದ ಬೊಲೆರೊ ಪಿಕ್-ಅಪ್ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದ ಪರಿಣಾಮ ಕೂಲಿಯಾಳು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ತಾಲೂಕಿನ ದೊಡ್ಡೇರಿ ರಸ್ತೆ ರಂಗನಾಥಪುರ ದೊಡ್ಡ ಚಾನಲ್ ಹತ್ತಿರ ನಡೆದಿದೆ.
ಶಿವಮೊಗ್ಗ ಗಾಜುನೂರು ಸಮೀಪದ ದೇವರಾಜ್ ಎಂಬುವವರ ನರ್ಸರಿಯಲ್ಲಿ ಕೆಲಸ ಮುಗಿಸಿಕೊಂಡು ಸುಮಾರು ೧೪ ಜನ ಕೂಲಿಯಾಳುಗಳು ಬೊಲೆರೊ ಪಿಕ್-ಅಪ್ ವಾಹನದಲ್ಲಿ ತಾಲೂಕಿನ ಅರಣ್ಯ ವ್ಯಾಪ್ತಿಯ ಬಂಡಿಗುಡ್ಡ, ನೆಟ್ಟಕಲ್ಲಹಟ್ಟಿ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಲಕ್ಷ್ಮೀ(೪೫) ಎಂಬ ಕೂಲಿಯಾಳು ಮಹಿಳೆ ಸ್ಥಳದಲ್ಲಿಯೇ ಪಟ್ಟಿದ್ದಾರೆ. ಉಳಿದಂತೆ ೧೩ ಜನ ಕೂಲಿಯಾಳುಗಳು ಗಂಭೀರವಾಗಿ ಗಾಯಗೊಂಡಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಘಾತ ಸಂಬಂಧ ಮಾಹಿತಿ ಪಡೆದಿದ್ದಾರೆ.