ಜ.೧ರಂದು `ಭೀಮಾ ಕೋರೆಗಾಂವ್ ವಿಜಯೋತ್ಸವ'

ಪಿ. ಮೂರ್ತಿ 
        ಭದ್ರಾವತಿ : ನಗರದ ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ (ಎವೈವಿಕೆ) ವತಿಯಿಂದ ಜ.೧ರಂದು `ಭೀಮಾ ಕೋರೆಗಾಂವ್ ವಿಜಯೋತ್ಸವ' ಹಮ್ಮಿಕೊಂಡಿದೆ. 
  `ಭೀಮಾ ಕೋರೆಗಾಂವ್ ವಿಜಯೋತ್ಸವ' ಕೇವಲ ಮಹರ್ ದಲಿತ ಸಮುದಾಯಕ್ಕೆ ಮಾತ್ರ ವಿಶೇಷವಾದ ದಿನವಲ್ಲ. ಅಸ್ಪೃಶ್ಯತೆ, ಜಾತಿಯತೆಗೆ ಒಳಗಾಗಿರುವ ದಲಿತರು ಮತ್ತು ಎಲ್ಲಾ ರೀತಿಯ ಶೋಷಣೆಗೆ ಒಳಗಾಗಿರುವ ದಮನಿತ ವರ್ಗಗಳಿಗೂ ಇದು ಸ್ವಾಭಿಮಾನದ ದಿನವಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ `ಭೀಮಾ ಕೋರೆಗಾಂವ್ ವಿಜಯೋತ್ಸವ' ಆಚರಿಸಲಾಗುತ್ತಿದೆ. 
    ನಗರದ ಡಾ. ರಾಜಕುಮಾರ್ ರಸ್ತೆ(ಬಿ.ಎಚ್ ರಸ್ತೆ), ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಂಜೆ ೪.೩೦ಕ್ಕೆ ವಿಜಯೋತ್ಸವ ಆಚರಿಸಲಾಗುತ್ತಿದೆ. ದಲಿತ ಸಂಘಟನೆಗಳು, ದಲಿತ ಮುಖಂಡರು, ಪ್ರಗತಿಪರರು, ಚಿಂತಕರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ (ಎವೈವಿಕೆ) ಸಂಚಾಲಕ ಪಿ. ಮೂರ್ತಿ ಕೋರಿದ್ದಾರೆ.