ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರೈತ ದಿನಾಚರಣೆ
ಕರ್ನಾಟಕ ಸರ್ಕಾರಿ ನೌಕರರ ತಾಲೂಕು ಸಂಘದ ಆಶ್ರಿತದ ಭದ್ರಾವತಿ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರೈತ ದಿನಾಚರಣೆ ಆಚರಿಸಲಾಯಿತು. ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ : ಕರ್ನಾಟಕ ಸರ್ಕಾರಿ ನೌಕರರ ತಾಲೂಕು ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರೈತ ದಿನಾಚರಣೆ ಆಚರಿಸಲಾಯಿತು.
ವಿಶೇಷತೆ ಎಂದರೆ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರ್ ಉದ್ಯೋಗ ತೊರೆದು ಸುಮಾರು ೭ ಎಕರೆ ಜಮೀನಿನಲ್ಲಿ ಅಡಕೆ, ತೆಂಗು, ಕಾಳು ಮೆಣಸು ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳು ಹಾಗು ಗುಲಾಬಿ, ಚೆಂಡು ಹೂವಿನ ತೋಟದ ಬೆಳೆ ಹಾಗು ಮಿಶ್ರ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿರುವ, ವಾರ್ಷಿಕ ೨೫ ರಿಂದ ೩೦ ಲಕ್ಷ ಆದಾಯ ಸಂಪಾದಿಸುತ್ತಿರುವ ತಾಲೂಕಿನ ಅರಳಿಹಳ್ಳಿ ಗ್ರಾಮದ ರೈತ ಎಸ್. ಬಸವರಾಜ್ ಹಾಗು ಬೊಮ್ಮನಹಳ್ಳಿ ರೈತ ಚಂದ್ರೇಶ್ ಮತ್ತು ತಿಪ್ಪೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೈತ ಎಸ್. ಬಸವರಾಜ್, ಭೂಮಿ ಮೇಲೆ ರೈತ ಪದದ ಪರಿಕಲ್ಪನೆ, ರೈತರ ಬದುಕು, ಎದುರಾಗುವ ಸಂಕಷ್ಟಗಳು, ಸಮಾಜದಲ್ಲಿ ರೈತರನ್ನು ನೋಡುವ ದೃಷ್ಟಿಕೋನ ಸೇರಿದಂತೆ ಇನ್ನಿತರ ವಿಚಾರಗಳನ್ನು ಮಕ್ಕಳಿಗೆ ತಿಳಿಸಿದರು.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಮುಖ್ಯ ಶಿಕ್ಷಕರಾದ ರೇಣುಕಪ್ಪ, ಕಿರಣ್ ಕುಮಾರ್, ಹೇಮಾ, ಕೆ. ಚೈತ್ರ ಸೇರಿದಂತೆ ಉಪಸ್ಥಿತರಿದ್ದರು.
ಆಶಾ ಪ್ರಾರ್ಥಿಸಿ, ಎಂ.ಎಸ್ ಮಂಜುನಾಥ್ ಸ್ವಾಗತಿಸಿ, ರವಿ ನಿರೂಪಿಸಿದರು. ರೇವತಿ ಅತಿಥಿಗಳ ಪರಿಚಯಿಸಿ ನೇತ್ರಾವತಿ ವಂದಿಸಿದರು.