ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಚುನಾವಣೆ : ೯೮೭ ಮತ ಚಲಾವಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ೫ ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗೆ ಭಾನುವಾರ ಸಿಲ್ವರ್ ಜ್ಯೂಬಿಲಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಚುನಾವಣೆ ನಡೆಯಿತು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ೫ ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗೆ ಭಾನುವಾರ ಸಿಲ್ವರ್ ಜ್ಯೂಬಿಲಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಚುನಾವಣೆ ನಡೆಯಿತು. 
    ೧೫ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಒಟ್ಟು ೩೨ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ತಲಾ ೧೫ ಮಂದಿ ಅಭ್ಯರ್ಥಿಗಳು ತಂಡಗಳಾಗಿ ರಚಿಸಿಕೊಂಡು ಹಾಗು ಉಳಿದ ಇಬ್ಬರು ಅಭ್ಯರ್ಥಿಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು.
      ಬೆಳಿಗ್ಗೆ ೧೦ ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಮತ ಕೇಂದ್ರದ ಸಮೀಪ ನಿವೃತ್ತ ಕಾರ್ಮಿಕರು ಗುಂಪು ಗುಂಪುಗಳಾಗಿ ಜಮಾಯಿಸಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿ, ಮತ ಹಾಕುವಂತೆ ಕೋರಿದರು. ಯಾವುದೇ ಚುನಾವಣೆಗೂ ಕಮ್ಮಿ ಇಲ್ಲದಂತೆ ಚುನಾವಣೆ ನಡೆದಿದ್ದು, ಸಂಜೆ ೪ ಗಂಟೆಗೆ ಮತದಾನ ಅಂತ್ಯಗೊಂಡಿತು. ಒಟ್ಟು ೨೯೦೯ ಮತದಾರರ ಪೈಕಿ ೯೮೭ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ೪.೩೦ರಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿತು.