ಜಮೀನು ವಿವಾದ ವೃದ್ಧನ ಮೇಲೆ ಹಲ್ಲೆ : ಸಾವು

ಕುಟುಂಬಸ್ಥರ ದೂರಿನ ಮೇರೆಗೆ ೩ ಜನರ ಬಂಧನ 

ಭದ್ರಾವತಿ ತಾಲೂಕಿನ ಉಕ್ಕುಂದ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದಲ್ಲಿ ಸುಬ್ರಹ್ಮಣ್ಯ ಎಂಬ ವೃದ್ಧನೋರ್ವನ ಮೃತಪಟ್ಟಿರುವುದು.   
    ಭದ್ರಾವತಿ : ತಾಲೂಕಿನ ಉಕ್ಕುಂದ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧನೋರ್ವನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಸಾವನ್ನಪ್ಪಿದ್ದಾರೆಂಬ ಮಾಹಿತಿ ಸ್ಥಳೀಯರಿಂದ ತಿಳಿದುಬಂದಿದೆ. 
    ಸುಬ್ರಹ್ಮಣ್ಯ(೬೮) ಸಾವನ್ನಪ್ಪಿದ ವೃದ್ಧ ಎಂದು ತಿಳಿದು ಬಂದಿದೆ. ಇವರ ಸಹೋದರಿಯ ಮಕ್ಕಳೊಂದಿಗೆ ಜಮೀನು ಸಂಬಂಧ ವಿವಾದವಿದ್ದು, ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಹಾಗು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯರವರು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ. 
    ಈ ನಡುವೆ ಗ್ರಾಮಾಂತರ ಪೊಲೀಸರಿಗೆ ಕುಟುಂಬಸ್ಥರು ಸುಬ್ರಹ್ಮಣ್ಯರನ್ನು ಕೊಲೆ ಮಾಡಲಾಗಿದೆ ಎಂದು ದೂರಿದ್ದು, ಇದರನ್ವಯ ೩ ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 
    ಸುಬ್ರಹ್ಮಣ್ಯರ ಮೃತದೇಹದ ಮರಣೋತ್ತರ ಪರೀಕ್ಷೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ನಂತರ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.