ಬಿ.ಜೆ ರಾಮಲಿಂಗಯ್ಯ ೪ನೇ ಬಾರಿಗೆ ಆಯ್ಕೆ : ಬಿಜೆಪಿ ಮುಖಂಡರಿಂದ ಅಭಿನಂದನೆ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ೪ನೇ ಬಾರಿಗೆ ಪುನಃ ಆಯ್ಕೆಯಾಗಿದ್ದಾರೆ. ಇವರನ್ನು ಜಿಲ್ಲಾ ಬಿಜೆಪಿ ಮುಖಂಡ ಎಂ. ಮಂಜುನಾಥ್, ಒಬಿಸಿ ಅಧ್ಯಕ್ಷ ಎಸ್. ರಾಜಶೇಖರ್ ಉಪ್ಪಾರ ಹಾಗೂ ನಗರ ಪ್ರಧಾನ ಕಾರ್ಯದರ್ಶಿ ರಘುರಾವ್ ಅಭಿನಂದಿಸಿದರು. 
    ಭದ್ರಾವತಿ : ನಗರದ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ೪ನೇ ಬಾರಿಗೆ ಪುನಃ ಆಯ್ಕೆಯಾಗಿದ್ದಾರೆ. 
    ರಾಮಲಿಂಗಯ್ಯರವರು ಈಗಾಗಲೇ ೧ ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟು ೧೫ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶ ಸಹ ಪ್ರಕಟಗೊಂಡಿದೆ. ನೂತನ ನಿರ್ದೇಶಕರ ಮಂಡಳಿ ರಚನೆಯಾಗಬೇಕಿದೆ. 
    ರಾಮಲಿಂಗಯ್ಯರವರನ್ನು ಜಿಲ್ಲಾ ಬಿಜೆಪಿ ಮುಖಂಡ ಎಂ. ಮಂಜುನಾಥ್, ಒಬಿಸಿ ಅಧ್ಯಕ್ಷ ಎಸ್. ರಾಜಶೇಖರ್ ಉಪ್ಪಾರ ಹಾಗೂ ನಗರ ಪ್ರಧಾನ ಕಾರ್ಯದರ್ಶಿ ರಘುರಾವ್ ಅಭಿನಂದಿಸಿದರು.