ಡಿ.೨೮ರಂದು ಮಧುಕರ್‌ಶೆಟ್ಟಿ ೭ನೇ ಪುಣ್ಯಸ್ಮರಣೆ



  ಭದ್ರಾವತಿ : ಯುವ ಸಮುದಾಯಕ್ಕೆ ಪ್ರಾಮಾಣಿಕತೆ ಮತ್ತು ದಕ್ಷತೆಯ ಸಂಕೇತವಾಗಿದ್ದ ಐಪಿಎಸ್ ಅಧಿಕಾರಿ ದಿವಂಗತ ಮಧುಕರ್ ಶೆಟ್ಟಿಯವರ ೭ನೇ ವರ್ಷದ ಪುಣ್ಯಸ್ಮರಣೆ ನಗರದ ಬಿ.ಎಚ್ ರಸ್ತೆ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಡಿ.೨೮ರಂದು ಹಮ್ಮಿಕೊಳ್ಳಲಾಗಿದೆ. 
   ನಗರದ ಮಧುಕರ್ ಶೆಟ್ಟಿ ಅಭಿಮಾನಿ ಬಳಗದಿಂದ ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಭಿಮಾನಿ ಬಳಗದ ಪ್ರಮುಖರು ಕೋರಿದ್ದಾರೆ.