ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್, ಜಾತ್ಯವಾದಿಗಳು, ಪ್ರಗತಿಪರರ ವಿರುದ್ಧ ಆಕ್ರೋಶ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹತ್ಯಾಕಾಂಡ ಖಂಡಿಸಿ ಭದ್ರಾವತಿ ಹಿರಿಯೂರು ಮಹಾಶಕ್ತಿ ಕೇಂದ್ರ ಹಾಗು ಬಾರಂದೂರು ವಂದೇ ಮಾತರಂ ಟ್ರಸ್ಟ್ ವತಿಯಿಂದ ಬಾರಂದೂರಿನಲ್ಲಿ ಬಿ.ಎ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯಾಕಾಂಡ ಘಟನೆಯನ್ನು ದೇಶದಲ್ಲಿನ ಜಾತ್ಯತೀತವಾದಿಗಳು, ಪ್ರಗತಿಪರರು ಹಾಗು ಕಾಂಗ್ರೆಸ್ ಪಕ್ಷದವರು ಖಂಡಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಮ್ಮ ದೇಶದಲ್ಲಿ ವಾಸಿಸುತ್ತಿರುವವರು ಹಿಂದೂಗಳಲ್ಲವೇ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹತ್ಯಾಕಾಂಡ ಖಂಡಿಸಿ ಹಿರಿಯೂರು ಮಹಾಶಕ್ತಿ ಕೇಂದ್ರ ಹಾಗು ಬಾರಂದೂರು ವಂದೇ ಮಾತರಂ ಟ್ರಸ್ಟ್ ವತಿಯಿಂದ ಬಾರಂದೂರಿನಲ್ಲಿ ಬಿ.ಎ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಯಾವುದೇ ಸಣ್ಣ ಕೋಮುಗಲಭೆಗಳು ನಡೆದರೆ ಜಾತ್ಯತೀತ ವಾದಿಗಳು, ಪ್ರಗತಿಪರರು ಹಾಗು ಕಾಂಗ್ರೆಸ್ ಪಕ್ಷದವರು ದೊಡ್ಡಮಟ್ಟದಲ್ಲಿ ಪ್ರತಿಭಟಿಸುತ್ತಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯಾಕಾಂಡ ಭೀಕರವಾಗಿದ್ದು, ವಿಶ್ವದ ಗಮನ ಸೆಳೆಯುತ್ತಿದೆ. ಆದರೆ ಈ ಘಟನೆಯನ್ನು ಪ್ರತಿಭಟಿಸದಿರುವುದು ಇವರ ಹಿಂದೂ ವಿರೋಧಿತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಯುವ ಮುಖಂಡ ಮಂಗೋಟೆ ರುದ್ರೇಶ್, ಪ್ರಧಾನ ಕಾರ್ಯದರ್ಶಿ ಮೊಸರಹಳ್ಳಿ ಅಣ್ಣಪ್ಪ, ಚನ್ನೇಶ್, ರಘುರಾವ್ ಹಾಗೂ ಹನುಮಂತ ನಾಯ್ಕ, ಮಂಡಲದ ಪ್ರಮುಖ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.