ಅತಿಥಿ ಉಪನ್ಯಾಸಕಿಗೆ ಲೈಂಗಿಕ ದೌರ್ಜನ್ಯ : ಪ್ರಾಂಶುಪಾಲ ವಿರುದ್ಧ ದೂರು



    ಭದ್ರಾವತಿ: ಕಾಲೇಜಿನ ಪ್ರಾಂಶುಪಾಲರೊಬ್ಬರು ಅತಿಥಿ ಉಪನ್ಯಾಸಕಿ ಒಬ್ಬರಿಗೆ ಕಾರಿನಲ್ಲಿ ಡ್ರಾಪ್ ಮಾಡುವ ವೇಳೆ ಲೈಂಗಿಕ ದೌರ್ಜನ್ಯ ನೀಡಿರುವ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
     ಬಿಆರ್ ಪ್ರಾಜೆಕ್ಟ್ ಶಾಂತಿನಗರದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 40 ವರ್ಷದ ಮಹಿಳೆ ಶಿವಮೊಗ್ಗದಿಂದ ಓಡಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲರು ಕಾರಿನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನೀಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ನಿಮ್ಮ ಜಾತಿಯವರು ಲೈಂಗಿಕ ಕ್ರಿಯೆಗೆ ಸಹಕರಿಸುವುದಾಗಿ ಮಹಿಳೆಗೆ ಪ್ರಚೋದಿಸಲಾಗಿದೆ ಎನ್ನಲಾಗಿದೆ.
     ಶ್ರೀಪಾದ ಹೆಗ್ಡೆ, ಮಂಗಳ ವಸುಂಧರ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಅಲ್ಲದೆ ಡಿ.19 ರಂದು ಮಂಜುಳ ಮತ್ತು ವಸುಂಧರರವರು ಡ್ಯಾನ್ಸ್ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಬೈಯುವಾಗ ಪ್ರಶ್ನಿಸಿದ ಅತಿಥಿ ಉಪನ್ಯಾಸಕಿಗೆ ಥಳಿಸಿದ್ದಾರೆ. ಅಲ್ಲೇ ಇದ್ದ ಪ್ರಾಂಶುಪಾಲ ಶ್ರೀಪಾದ ಹೆಗ್ಡೆ ಜಾತಿ ಬುದ್ದಿ ಬಿಡಬೇಕು ಎಂದು ಹೇಳಿ ನಿಂದಿಸಿರುವ ಬಗ್ಗೆ ದೂರಲಾಗಿದೆ.