ಮಾವಿನಕೆರೆ ಗ್ರಾಮದಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ : ಸಿಹಿ ಹಂಚಿಕೆ
ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ ನಡೆಸಿ ಹಬ್ಬದ ಸಂದೇಶ ಸಾರುವ ಮೂಲಕ ಸಿಹಿ ಹಂಚಲಾಯಿತು.
ಭದ್ರಾವತಿ : ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ ನಡೆಸಿ ಹಬ್ಬದ ಸಂದೇಶ ಸಾರುವ ಮೂಲಕ ಸಿಹಿ ಹಂಚಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂತ ಕ್ಲಾಸ್‌ರ ವೇಷ ಧರಿಸಿದ ಭಕ್ತರು ಸಂಗೀತ ವಾದ್ಯಗಳೊಂದಿಗೆ ಕ್ರಿಸ್‌ಮಸ್ ಗಾಯನ ನಡೆಸಿದರು. ಅಲ್ಲದೆ ಏಸುಕ್ರಿಸ್ತರ ತ್ಯಾಗ, ಪ್ರೀತಿ, ಐಕ್ಯತೆಯ ಸಂದೇಶ ಸಾರಲಾಯಿತು.
ಧರ್ಮಕೇಂದ್ರದ ಗುರು ಫಾದರ್ ಪೌಲ್ ಕ್ರಾಸ್ತ ಮತ್ತು ಗ್ರಾಮದ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.