ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯದಲ್ಲಿ ನೂತನ ವರ್ಷಾಚರಣೆ : ದಿನದರ್ಶಿಕೆ ವಿತರಣೆ
ಭದ್ರಾವತಿ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನೂತನ ವರ್ಷಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದ ನ್ಯಾಯವಾದಿ, ಯುವ ಮುಖಂಡ ಮಂಗೋಟೆ ರುದ್ರೇಶ್ ಹಾಗು ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತಾ ಅವರಿಗೆ ಗೌರವ ಶ್ರೀರಕ್ಷೆ ನೀಡಿ ಆಶೀರ್ವದಿಸಿದರು.
ಭದ್ರಾವತಿ: ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನೂತನ ವರ್ಷಾಚರಣೆ ಆಚರಿಸುವ ಮೂಲಕ ದಿನದರ್ಶಿಕೆ ವಿತರಿಸಿ ಬಿ.ಕೆ ಮಾಲಾ ಅಕ್ಕ ಶುಭ ಕೋರಿದರು.
ನೂತನ ವರ್ಷಾಚರಣೆ ಕುರಿತು ಸಂದೇಶ ನೀಡಿದ ಬಿ.ಕೆ ಮಾಲಾ ಅಕ್ಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದ ನ್ಯಾಯವಾದಿ, ಯುವ ಮುಖಂಡ ಮಂಗೋಟೆ ರುದ್ರೇಶ್ ಹಾಗು ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತಾ ಅವರಿಗೆ ಗೌರವ ಶ್ರೀರಕ್ಷೆ ನೀಡಿ ಆಶೀರ್ವದಿಸಿದರು.
ಮಂಗೋಟೆ ರುದ್ರೇಶ್ ಮಾತನಾಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯ ಒಂದು ಅದ್ಭುತ ಆಧ್ಯಾತ್ಮಿಕ ಕ್ಷೇತ್ರವಾಗಿದೆ. ಮುಖ್ಯ ಕ್ಷೇತ್ರವಾಗಿರುವ ರಾಜಸ್ಥಾನದ ಮೌಂಟ್ ಅಬು ಪ್ರತಿಯೊಬ್ಬರು ವೀಕ್ಷಿಸಬೇಕಾದ ಸ್ಥಳವಾಗಿದೆ. ಇಂತಹ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಪ್ರತಿಯೊಬ್ಬರ ಮನಸ್ಸು ಪರಿವರ್ತನೆಗೊಳ್ಳುವ ಮೂಲಕ ಸನ್ಮಾರ್ಗದಲ್ಲಿ ನಡೆಯುವಂತಾಗುತ್ತದೆ ಎಂದರು. ಮಧ್ಯಾಹ್ನ ಸಿಹಿ ಹಂಚಿಕೆಯೊಂದಿಗೆ ಬ್ರಹ್ಮಭೋಜನ ನಡೆಯಿತು. ನೂರಾರು ಮಂದಿ ಪಾಲ್ಗೊಂಡಿದ್ದರು.
ಪ್ರಮುಖರಾದ ಪದ್ಮ ಅಕ್ಕ, ಪುಷ್ಪಾ ಅಕ್ಕ, ರಾಜೇಶ್ ಅಣ್ಣ, ಡಾ. ಜಿ.ಎಂ ನಟರಾಜ್, ಮಾರುತಿ ರಾಜಾ ಅಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ದೀಪಾ ಅಕ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.