ಸಹಕಾರ ಧುರೀಣ, ಕಾರ್ಮಿಕ ಮುಖಂಡ ಕೆ.ಎನ್ ಭೈರಪ್ಪ ಗೌಡ ನಿಧನ
ಕೆ.ಎನ್ ಭೈರಪ್ಪಗೌಡ
ಭದ್ರಾವತಿ: ಹಿರಿಯ ಕಾರ್ಮಿಕ ಮುಖಂಡ, ಸಹಕಾರಿ ಧುರೀಣ, ನಗರಸಭೆ ಮಾಜಿ ಸದಸ್ಯ ಕೆ.ಎನ್ ಭೈರಪ್ಪಗೌಡ(೮೪) ಶುಕ್ರವಾರ ರಾತ್ರಿ ನಿಧನ ಹೊಂದಿದರು.
ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರರು, ಸೊಸೆ ಹಾಗು ಅಳಿಯಂದಿರು ಮತ್ತು ಮೊಮ್ಮಕ್ಕಳು ಇದ್ದಾರೆ. ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಕಾರ್ಮಿಕ ಮುಖಂಡರಾಗಿ ಹಾಗು ಸಹಕಾರಿ ಧುರೀಣರಾಗಿ ಗುರುತಿಸಿಕೊಂಡಿದ್ದರು.
ಹಳೇನಗರದ ಮಾಡೆಲ್ ಕೋ-ಅಪರೇಟಿವ್ ಹೌಸಿಂಗ್ ಸೊಸೈಟಿ ನಿರ್ದೇಶಕರಾಗಿದ್ದು, ರಾಜ್ಯ ಸಹಕಾರ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇವರ ನಿಧನಕ್ಕೆ ವಿಐಎಸ್‌ಎಲ್ ಕಾಯಂ ಹಾಗು ನಿವೃತ್ತ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಗಣ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
