ತರಳಬಾಳು ಹುಣ್ಣಿಮೆ ಮಹೋತ್ಸವ ಸಾಂಸ್ಕೃತಿಕ-ಆಧ್ಯಾತ್ಮಿಕ ಪರಂಪರೆಗೆ ಶಕ್ತಿ : ಬಿ.ವೈ ರಾಘವೇಂದ್ರ

ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಜ.೨೪ರಿಂದ ಆರಂಭಗೊಳ್ಳಲಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ ತರಳಬಾಳು ಹುಣ್ಣಿಮೆ ಮಹೋತ್ಸವ ಸಿದ್ದತಾ ಕಾರ್ಯಗಳನ್ನು ಸಂಸದ ಬಿ.ವೈ ರಾಘವೇಂದ್ರ ಶುಕ್ರವಾರ ಪರಿಶೀಲನೆ ನಡೆಸಿದರು.  
    ಭದ್ರಾವತಿ :  ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವ ಈ ರಾಜ್ಯದ ಸಾಂಸ್ಕೃತಿಕ ಹಾಗು ಆಧ್ಯಾತ್ಮಿಕ ಪರಂಪರೆಗೆ ಶಕ್ತಿ ತುಂಬವ ಕಾರ್ಯಕ್ರಮವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
    ಅವರು ಶುಕ್ರವಾರ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಜ.೨೪ರಿಂದ ಆರಂಭಗೊಳ್ಳಲಿರುವ ಹುಣ್ಣಿಮೆ ಮಹೋತ್ಸವದ ಸಿದ್ದತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.  
    ೩೫ ವರ್ಷಗಳ ನಂತರ ಭದ್ರಾವತಿಯಲ್ಲಿ ಮತ್ತೊಮ್ಮೆ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ತರಳಬಾಳು ಜಗದ್ಗುರುಗಳು ಸಮಾಜದ ಬಾಂಧವರಿಗೆ ಒಳ್ಳೆಯ ಅವಕಾಶ ಮಾಡಿಕೊಟ್ಟಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದರು. 
  ಮಹೋತ್ಸವದಲ್ಲಿ ಕುಸ್ತಿ, ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಚಿಂತನಾ ಗೋಷ್ಠಿಗಳು ೯ ದಿನಗಳ ಕಾಲ ನಡೆಯಲಿವೆ. ಈ ಬಾರಿ ವಿಶೇಷವಾಗಿ ಹುತಾತ್ಮರಾದ ವೀರಸೈನಿಕ ಕುಟುಂಬವನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಲಾಗಿದೆ.  ಪ್ರತಿವರ್ಷ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದ್ದ ಹುಣ್ಣಿಮೆ ಮಹೋತ್ಸವಕ್ಕೆ ನಾವು ಭಕ್ತರಾಗಿ ಹೋಗುತ್ತಿದ್ದೆವು. ಆದರೆ  ಇಂದು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂದರು.
ಈ ಹಿಂದಿನ ಹುಣ್ಣಿಮೆ ಮಹೋತ್ಸವದ ದಾಖಲೆಗಳನ್ನು ಮೀರಿ ಮತ್ತಷ್ಟು ಮೆರಗು ತರುವ ಕೆಲಸ ಇಲ್ಲಿನ ಎಲ್ಲಾ  ಭಕ್ತರು ಹಾಗೂ ಸಮಾಜದವತಿಯಿಂದ ನೆಡೆಯಬೇಕು ಎಂದರು.
    ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣಾ ಸಮಿತಿ ಪ್ರಮುಖರಾದ ಎಚ್.ಆರ್ ಬಸವರಾಜಪ್ಪ, ಕೆ.ಎಚ್ ತೀರ್ಥಯ್ಯ, ಕೆ.ಎಸ್ ವಿಜಯಕುಮಾರ್, ಎಚ್.ಬಿ ಸಿದ್ದೇಶ್, ಶಾಂತಣ್ಣ, ಸಂಜೀವಕುಮಾರ್, ಏಕಾಂತ್, ಸಂತೋಷ್, ಮಲ್ಲಯ್ಯ, ಯುವ ಮುಖಂಡ ಮಂಗೋಟೆ ರುದ್ರೇಶ್, ಜಿ.ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.