ನೂತನ ಡಾ. ರಾಜಕುಮಾರ್, ಡಾ. ಪುನೀತ್ ರಾಜಕುಮಾರ್ ಪ್ರತಿಮೆಗಳಿಗೆ ಗೀತೆಗಳ ಮೂಲಕ ಗೌರವ ನಮನ
ಭದ್ರಾವತಿ ನಗರದ ಡಾ. ರಾಜಕುಮಾರ್ ರಸ್ತೆ(ಬಿ.ಎಚ್ ರಸ್ತೆ), ಚಾಮೇಗೌಡ ಏರಿಯಾ, ನಗರಸಭೆ ಮಾರುಕಟ್ಟೆ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ರತ್ನ, ವರನಟ ಡಾ. ರಾಜಕುಮಾರ್ ಹಾಗು ಕರ್ನಾಟಕ ರತ್ನ, ಸಮಾಜ ಸೇವಕ ಡಾ. ಪುನೀತ್ ರಾಜಕುಮಾರ್ ಅವರ ದೇವಾಲಯಕ್ಕೆ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ತಂಡದ ಕಲಾವಿದರು ತೆರಳಿ ವಿಶಿಷ್ಟವಾಗಿ ಗೌರವ ನಮನ ಸಲ್ಲಿಸಿದರು.
ಭದ್ರಾವತಿ: ನಗರದ ಡಾ. ರಾಜಕುಮಾರ್ ರಸ್ತೆ(ಬಿ.ಎಚ್ ರಸ್ತೆ), ಚಾಮೇಗೌಡ ಏರಿಯಾ, ನಗರಸಭೆ ಮಾರುಕಟ್ಟೆ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ರತ್ನ, ವರನಟ ಡಾ. ರಾಜಕುಮಾರ್ ಹಾಗು ಕರ್ನಾಟಕ ರತ್ನ, ಸಮಾಜ ಸೇವಕ ಡಾ. ಪುನೀತ್ ರಾಜಕುಮಾರ್ ಅವರ ದೇವಾಲಯಕ್ಕೆ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ತಂಡದ ಕಲಾವಿದರು ತೆರಳಿ ವಿಶಿಷ್ಟವಾಗಿ ಗೌರವ ನಮನ ಸಲ್ಲಿಸಿದರು.
ಕಳೆದ ಕೆಲವು ದಿನಗಳ ಹಿಂದೆ ನೂತನ ದೇವಾಲಯ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ರಾಜಕುಮಾರ್‌ರವರು ಲೋಕಾರ್ಪಣೆಗೊಳಿಸಿದ್ದರು. ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ತಂಡದ ಕಲಾವಿದರು ಡಾ. ರಾಜಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್‌ರವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಈ ಇಬ್ಬರು ಮಹಾನ್ ವ್ಯಕ್ತಿಗಳು ನಾಡಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು. ಅಲ್ಲದೆ ಗೀತೆಗಳ ಮೂಲಕ ಗೌರವ ನಮನ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ತಮಟೆ ಜಗದೀಶ್, ಕಲಾವಿದರಾದ ಕೆ.ಎಸ್ ರವಿಕುಮಾರ್, ಜಿ. ದಿವಾಕರ್, ಸಿ. ಮಹೇಶ್(ಚಿಕ್ಕ ), ರತ್ನ ಗಂಗಾಧರ್, ಎಂ. ಮಂಜುಳ, ಜಿ. ರವಿಕುಮಾರ್, ಮನೋಹರ, ಎಂ. ನಾಗರತ್ನ, ಸುನೀತಬಾಯಿ, ವಿನುತ, ನೇಸರ ಮಂಜುನಾಥ ಮತ್ತು ಕೆ.ಎಂ ದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.