ತರಳಬಾಳು ಹುಣ್ಣಿಮೆ ಮಹೋತ್ಸವ : ಕಬಡ್ಡಿ ಪಂದ್ಯಾವಳಿ, ಭಜನಾ ಸ್ಪರ್ಧೆಗಳಿಗೆ ಚಾಲನೆ
ಚರಿತ್ರೆ, ಪುರಾಣಗಳಲ್ಲಿ ಭಜನೆ ಪಾತ್ರ ಮಹತ್ವದ್ದಾಗಿದೆ : ಟಿ.ಎಂ ಭಾಸ್ಕರ್
ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಕಬಡ್ಡಿ ಪಂದ್ಯಾವಳಿ ಹಾಗು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸ್ಪರ್ಧೆ ಆಯೋಜಿಸಲಾಗಿತ್ತು.
ಭದ್ರಾವತಿ : ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಕಬಡ್ಡಿ ಪಂದ್ಯಾವಳಿ ಹಾಗು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸ್ಪರ್ಧೆ ಆಯೋಜಿಸಲಾಗಿತ್ತು.
ನಗರದ ಅಂತರಾಷ್ಟ್ರೀಯ ಹಿರಿಯ ಕಬಡ್ಡಿ ಆಟಗಾರರಾದ ಕೃಷ್ಣೇಗೌಡ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದರು. ರಾಜ್ಯದ ವಿವಿಧೆಡೆಗಳಿಂದ ಸುಮಾರು ೧೦ ಕಬಡ್ಡಿ ತಂಡಗಳು ಭಾಗವಹಿಸಿದ್ದವು. ಶ್ರೀ ಮಠದ ಶಿಕ್ಷಣ ಸಂಸ್ಥೆಗಳ ಹಾಗು ನಗರದ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಕ್ರೀಡಾ ಸಮಿತಿ ಸಂಚಾಲಕರಾದ ಎಂ.ಎಸ್ ರವಿ ಹಾಗು ಬಿ. ಮೂರ್ತಿ ನೇತೃತ್ವದಲ್ಲಿ ಕಬಡ್ಡಿ ಕ್ರೀಡೆ ಜರುಗಿತು.
ಚರಿತ್ರೆ, ಪುರಾಣಗಳಲ್ಲಿ ಭಜನೆ ಪಾತ್ರ ಮಹತ್ವದ್ದಾಗಿದೆ : ಟಿ.ಎಂ ಭಾಸ್ಕರ್
ಚರಿತ್ರೆ ಹಾಗೂ ಪುರಾಣಗಳಲ್ಲಿ ಭಜನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ್ ಹೇಳಿದರು.
ಅವರು ಭಜನಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಜಾತ್ರೆ ಹಾಗೂ ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ, ಚರಿತ್ರೆ, ಪುರಾಣಗಳಲ್ಲಿ ಭಜನೆಗಳ ಪಾತ್ರ ಮುಖ್ಯವಾಗಿದೆ ಎಂದರು.
ತಳ, ಲಯ, ಸಂಗೀತ, ಸಂಸ್ಕಾರ ಮತ್ತು ನಡವಳಿಕೆಗಳಿಗೆ ಜಾನಪದವೇ ಮೂಲಭೂತ ಬೇರು. ನಡೆ-ನುಡಿ, ಜೀವನಶೈಲಿ, ಜನಪರ ಸೇವೆ, ಆದರ್ಶಗಳು ಹಾಗೂ ಮೌಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ತರಳಬಾಳು ಮಠದ ಮೇಲಿದೆ ಎಂದರು.
ಜನಪದ ಹಾಡುಗಳಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿವೆ. ಆಧುನಿಕತೆಯಿಂದ ಜಾನಪದಕ್ಕೆ ಪೆಟ್ಟು ಬಿದ್ದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯಸಾನಿಧ್ಯ ವಹಿಸಿದ್ದು, ಶ್ರೀ ಮಠದ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ಎಸ್ ಜತ್ತಿ, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘ, ಸಿರಿಗೆರೆ ಅಧ್ಯಕ್ಷ ಎಚ್.ಆರ್ ಬಸವರಾಜಪ್ಪ. ಆದ್ರಿಕಟ್ಟೆ ಬಸವರಾಜಪ್ಪ, ನ್ಯಾಯವಾದಿ ಎಚ್.ಬಿ ಸಿದ್ದೇಶ್, ಅಂತರಾಷ್ಟ್ರೀಯ ಹಿರಿಯ ಕಬಡ್ಡಿ ಆಟಗಾರ ಎಚ್.ಆರ್ ರಂಗನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ನಿವೃತ್ತ ಉಪನ್ಯಾಸಕ, ಜಾನಪದ ವಿದ್ವಾಂಸ ಬಸವರಾಜ ನೆಲ್ಲಿಸರ, ಹವ್ಯಾಸಿ ಖಗೋಳ ಶಾಸ್ತ್ರಜ್ಞ, ಶಿಕ್ಷಕ ಹರೋನಹಳ್ಳಿ ಸ್ವಾಮಿ, ತೀರ್ಪುಗಾರರಾದ ದೈಹಿಕ ಶಿಕ್ಷಕರಾದ ರೇವಣ್ಣಸಿದ್ದಪ್ಪ, ಶರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೈ.ಬಿ.ನಂದಿನಿ ನಿರೂಪಿಸಿದರು, ಬಿ.ಜೆ.ಮಂಜುನಾಥ್ ಸ್ವಾಗತಿಸಿದರು. ಭಜನಾ ಮೇಳದಲ್ಲಿ ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ, ಶಿವಮೊಗ್ಗ ತಾಲೂಕಿನ ಸುಮಾರು ೫೦ ಭಜನಾ ತಂಡದವರು ಭಾಗವಹಿಸಿದ್ದರು.
ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.
.jpeg)