ಬಾಪೂಜಿ ಹರಿಜನ ಸೇವಾ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆ

    ಭದ್ರಾವತಿ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಾಪೂಜಿ ಹರಿಜನ(ಮಾದರ) ಸೇವಾ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
  ಅಧ್ಯಕ್ಷರಾಗಿ ಸರ್ಕಾರಿ ನಿವೃತ್ತ ನೌಕರ, ಗಾಯಕ ಬಿ.ಎ ಮಂಜುನಾಥ್, ಗೌರವಾಧ್ಯಕ್ಷರಾಗಿ ಡಿ. ಮಾರುತಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್, ಸಲಹೆಗಾರರಾಗಿ ಎಚ್.ಎನ್ ಶ್ರೀನಿವಾಸ್, ಕಾನೂನು ಸಲಹೆಗಾರರಾಗಿ ಹಿರಿಯ ವಕೀಲ ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಬಸವರಾಜಪ್ಪ, ಸಹ ಕಾರ್ಯದರ್ಶಿಯಾಗಿ ಹುಚ್ಚಣ್ಣ, ಖಜಾಂಚಿಯಾಗಿ ವೈ.ಕೆ ಮಂಜುನಾಥ್, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಎನ್ ರವಿಕುಮಾರ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎ.ಕೆ ನರಸಿಂಹಪ್ಪ, ರಾಜು, ಶ್ರೀಕಾಂತ್, ಚಂದ್ರಯ್ಯ, ಸಿ. ಮಲ್ಲಿಕಾರ್ಜುನ, ಅಂಜನಮೂರ್ತಿ, ಸಿದ್ದರಾಮಪ್ಪ ಮತ್ತು ಟಿ.ಎನ್ ಹರೀಶ್‌ಕುಮಾರ್ ಆಯ್ಕೆಯಾಗಿದ್ದಾರೆ.