ನಿವೃತ್ತ ನೌಕರರ ಕಲ್ಯಾಣ ಕೇಂದ್ರದ ಅಧ್ಯಕ್ಷರಾಗಿ ಬಿ.ಜೆ ರಾಮಲಿಂಗಯ್ಯ ಎರಡನೇ ಬಾರಿಗೆ ಆಯ್ಕೆ
ಬಿ.ಜೆ ರಾಮಲಿಂಗಯ್ಯ
ಭದ್ರಾವತಿ : ನಗರದ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷರಾಗಿ ೨ನೇ ಬಾರಿಗೆ ಬಿ.ಜೆ ರಾಮಲಿಂಗಯ್ಯ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದು ರಾಮಲಿಂಗಯ್ಯ ನೇತೃತ್ವ ತಂಡ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿತ್ತು. ಇದೀಗ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ೨ನೇ ಬಾರಿಗೆ ರಾಮಲಿಂಗಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಬಿ. ಮಂಜುನಾಥ, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಅಡವೀಶಯ್ಯ, ಕಾರ್ಯದರ್ಶಿಯಾಗಿ ಎಸ್.ಎಚ್ ಹನುಮಂತರಾವ್, ಕಾರ್ಯದರ್ಶಿಯಾಗಿ ಬಿ.ಎನ್ ಶ್ರೀನಿವಾಸ ಹಾಗು ಖಜಾಂಚಿಯಾಗಿ ಕೆಂಪಯ್ಯ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಜಿ. ಶಂಕರ್, ಬಿ.ಕೆ ರವೀಂದ್ರ ರೆಡ್ಡಿ, ಎಸ್.ಎಸ್ ಭೈರಪ್ಪ ಮತ್ತು ರಾಮಪ್ಪ ವಿ. ಮುನೇನಕೊಪ್ಪ ಆಯ್ಕೆಯಾಗಿದ್ದಾರೆ. ಹೊಸದಾಗಿ ನಿರ್ದೇಶಕರಾಗಿ ಚಂದ್ರಮೋಹನ್, ಎಸ್.ಇ ನಂಜುಂಡೇಗೌಡ, ಎ. ಈಶ್ವರಪ್ಪ, ರಾಜ ಮತ್ತು ಎಸ್. ನರಸಿಂಹಚಾರ್ ಆಯ್ಕೆಯಾಗಿದ್ದಾರೆ.