ಆರೋಗ್ಯವನ್ನು ವ್ಯಕ್ತಿಗತ ಸಮಸ್ಯೆಯಾಗಿ ಮಾತ್ರ ನೋಡದೆ ಸಮಾಜದ ಒಟ್ಟಾರೆ ಹೊಣೆಗಾರಿಕೆಯಾಗಿ ನೋಡಿ : ಡಾ. ಧನಂಜಯ ಸರ್ಜಿ
ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಸಂಜೆ ಕಾರ್ಯಕ್ರಮದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳನ್ನು ಮಹೋತ್ಸವಕ್ಕೆ ಆಗಮಿಸಿದ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಭದ್ರಾವತಿ : ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಸಂಜೆ ಕಾರ್ಯಕ್ರಮದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಪಾಲ್ಗೊಂಡು ಆಶೀರ್ವಚನ ನೀಡಿದರು.
ಮಹೋತ್ಸವಕ್ಕೆ ಆಗಮಿಸಿದ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ನಡೆದ ಆರೋಗ್ಯ ಮತ್ತು ಸಮಾಜ ವಿಷಯ ಕುರಿತು ಮಾತನಾಡಿದ, ವಿಧಾನ ಪರಿಷತ್ ಸದಸ್ಯ, ಮಕ್ಕಳ ತಜ್ಞ, ಡಾ. ಧನಂಜಯ ಸರ್ಜಿ, ಭದ್ರಾವತಿಯ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ನಮ್ಮ ಜೀವನದ ಮೌಲ್ಯಗಳನ್ನು ನೆನಪಿಸುವ ಒಂದು ಮಹತ್ವದ ಸಾಮಾಜಿಕ ಸಂದರ್ಭವೂ ಹೌದು. ತರಳಬಾಳು ಶ್ರೀಗಳು ಕರ್ನಾಟಕದ ಆಧುನಿಕ ಭಗೀರಥರಾಗಿದ್ದಾರೆ ಎಂದರು.
ಆರೋಗ್ಯವಂತ ವ್ಯಕ್ತಿಯಿಂದಲೇ ಆರೋಗ್ಯವಂತ ಸಮಾಜ, ಸುಸಂಸ್ಕೃತ ರಾಷ್ಟ್ರ ಸಾಧ್ಯ, ಮಾನವ ಜೀವನದಲ್ಲಿ ಆರೋಗ್ಯವೆಂಬುದು ಕೇವಲ ದೇಹದ ಸೌಖ್ಯವಲ್ಲ. ಅದು ಮನಸ್ಸಿನ ಸಮತೋಲನ, ಸಮಾಜದ ಒಳಿತಿನ ಚಿಂತನೆ ಮತ್ತು ಸಂಸ್ಕಾರದ ಪ್ರತಿಬಿಂಬವಾಗಿದೆ. ಆರೋಗ್ಯವನ್ನು ವ್ಯಕ್ತಿಗತ ಸಮಸ್ಯೆಯಾಗಿ ಮಾತ್ರ ನೋಡದೆ ಸಮಾಜದ ಒಟ್ಟಾರೆ ಹೊಣೆಗಾರಿಕೆಯಾಗಿ ನೋಡಬೇಕಿದೆ ಎಂದರು.
ಜೀವನಶೈಲಿ, ರೋಗಗಳು, ಒತ್ತಡದ ಬದುಕು, ಆಹಾರ ಪದ್ಧತಿ ಮತ್ತು ಮಾನಸಿಕ ಆರೋಗ್ಯ ಈ ಎಲ್ಲವು ಸಮಾಜದ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿವೆ ಎಂದರು.
ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯಸರ್ಜಿ ಮಾತನಾಡಿದರು.
ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ ಮಾತನಾಡಿ, ಆರೋಗ್ಯ ಇದ್ದರೆ ಮಾತ್ರ ಸಮಾಜ, ಆಯುರ್ವೇದವು ವೈದ್ಯ ಪದ್ದತಿಗಳ ತಾಯಿ. ನಮ್ಮ ತಾಯಿಯನ್ನು ಚೆನ್ನಾಗಿನೊಡಿಕೊಂಡರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಇಂದಿನ ಜೀವನದಲ್ಲಿ ಮನಸ್ಸು, ಆರೋಗ್ಯ ಉತ್ತಮವಾಗಿರಲಿ. ಆಯುರ್ವೇದವು ಚಿಕಿತ್ಸೆ ಮಾತ್ರವಲ್ಲ. ಅದು ಜೀವನ ನಡೆಸುವ ಕಲೆ. ಸಮತೋಲನದ ಆಹಾರ, ಶುದ್ಧ ಜೀವನಶೈಲಿ, ಪ್ರಕೃತಿಯೊಂದಿಗೆ ಹೊಂದಾಣಿಕೆ ಇವುಗಳ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಮಾರ್ಗವನ್ನು ಆಯುರ್ವೇದ ನಮಗೆ ತೋರಿಸುತ್ತದೆ ಎಂದರು.
`ರೋಗ ತಡೆಗಟ್ಟುವಿಕೆ ಚಿಕಿತ್ಸೆಗಿಂತ ಶ್ರೇಷ್ಠ' ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಆಧುನಿಕ ವೈದ್ಯಕೀಯ ಮತ್ತು ಪಾರಂಪರಿಕ ಜ್ಞಾನ ಕೈಜೋಡಿಸಿದಾಗ ಮಾತ್ರ ಸಮಗ್ರ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಮುಖ್ಯಸ್ಥ ಮತ್ತು ಲೀಡ್ ಲನ್ಸಲ್ಟೆಂಟ್ ಡಾ.ಸಿ.ಎನ್.ಪಾಟೀಲ್ ಮಾತನಾಡಿ, ಧೂಮಪಾನ ಒಂದು ಮೌನ ಹಂತಕ. ಧೂಮಪಾನ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ದುಶ್ಚಟವಲ್ಲ. ಅದು ಕುಟುಂಬದ ಆರೋಗ್ಯ, ಸಮಾಜದ ಭವಿಷ್ಯ ಮತ್ತು ರಾಷ್ಟ್ರದ ಪ್ರಗತಿಗೆ ಹೊಡೆತ ನೀಡುವ ಗಂಭೀರ ಸಮಸ್ಯೆ. ಒಂದು ಸಿಗರೇಟು ಸುಡುತ್ತಿರುವ ಕ್ಷಣದಲ್ಲಿ ಸಿಗುವ ತಾತ್ಕಾಲಿಕ ಸುಖದ ಹಿಂದೆ, ಅನೇಕ ವರ್ಷಗಳ ನೋವು, ರೋಗ ಮತ್ತು ನಷ್ಟ ಅಡಗಿದೆ ಎಂಬುದನ್ನು ನಾವು ಮರೆಯಬಾರದು. ಧೂಮಪಾನದಿಂದ ಉಂಟಾಗುವ ಶ್ವಾಸಕೋಶದ ಕ್ಯಾನ್ಸರ್, ಹೃದಯ ರೋಗಗಳು, ಉಸಿರಾಟದ ತೊಂದರೆ, ಸ್ಟ್ರೋಕ್ ಮತ್ತು ಅನೇಕ ಮಾರಕ ಕಾಯಿಲೆಗಳು. ಇನ್ನೂ ದುಃಖಕರ ಸಂಗತಿ ಎಂದರೆ, ಧೂಮಪಾನ ಮಾಡುವ ವ್ಯಕ್ತಿಯ ಜೊತೆಗೆ ಬದುಕುವ ನಿರಪರಾಧ ಕುಟುಂಬಸ್ಥರೂ ಕೂಡ ಪ್ಯಾಸಿವ್ ಸ್ಮೋಕಿಂಗ್ ಮೂಲಕ ಈ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಧೂಮಪಾನವನ್ನು ಸ್ಟೈಲ್ ಎಂದು ಭಾವಿಸಬೇಡಿ. ಅದು ಶಕ್ತಿಯ ಸಂಕೇತವಲ್ಲ. ಅದು ದುರ್ಬಲತೆಯ ಸೂಚನೆ. ನಿಮ್ಮ ಆರೋಗ್ಯವೇ ನಿಮ್ಮ ಭವಿಷ್ಯ, ನಿಮ್ಮ ಕನಸುಗಳ ಬಲ ಎಂದರು.
ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯಸಾನಿಧ್ಯ ವಹಿಸಿದ್ದರು. ದಾವಣಗೆರೆ ಸಂಸದೆ ಡಾ.ಪ್ರಭ್ರಾಮಲ್ಲಿಕಾರ್ಜುನ್, ಇಂಗ್ಲೆಂಡ್ ವೈದ್ಯರಾದ ಡಾ.ಎಸ್.ಶಿವಪ್ರಸಾದ್, ಡಾ.ಎಚ್.ಜೆ.ವಿಜಯ್‌ಕುಮಾರ್, ಕೋಗಳಿ ಕೋಟ್ರೇಶ್, ಎಚ್.ಆರ್ ಬಸವರಾಜಪ್ಪ, ಬಿ.ಕೆ ಜಗನ್ನಾಥ ಉಪಸ್ಥಿತರಿದ್ದರು.
ಸಿರಿಗೆರೆಯ ಅಕ್ಕನ ಬಳಗದಿಂದ ವಚನಗೀತೆ, ತೋಟಪ್ಪ ಉತ್ತಂಗಿ ಅವರಿಂದ ಸಂಗೀತ ಕಾರ್ಯಕ್ರಮ, ತರಳಬಾಳು ಸ್ಪೋರ್ಟ್ಸ್ ಅಕಾಡೆಮಿಯಿಂದ ಯೋಗಾಸನ, ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನವರಿಂದ ಕಿರು ನಾಟಕ, ನಲ್ಲೂರು ತರಳಬಾಳು ಶಾಲೆಯಿಂದ ವಚನ ನೃತ್ಯ, ಶ್ರೀಮತಿ ಕಲ್ಲಮ್ಮ ಪ್ರೌಢಶಾಲೆಯಿಂದ ಸೋಲಿಗರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
.jpeg)
.jpeg)