ರಾಚಮ್ಮ ನಿಧನಕ್ಕೆ ಸಂತಾಪ
ರಾಚಮ್ಮ
ಭದ್ರಾವತಿ: ತಾಲೂಕಿನ ಶ್ರೀರಾಮನಗರ ಗ್ರಾಮದ ಸಂಸ್ಥಾಪಕರು, ಸಮಾಜ ಸೇವಕರಾದ ದಿವಂಗತ ಶ್ರಮಜೀವಿ ಮರಿಸಿದ್ದಯ್ಯನವರು ಧರ್ಮಪತ್ನಿ ರಾಚಮ್ಮ(೮೬)ನವರ ನಿಧನಕ್ಕೆ ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
ರಾಚಮ್ಮ ಅವರಿಗೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಸ್.ಎಂ ಭೈರೇಗೌಡ ಮತ್ತು ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಸ್.ಎಂ ರಮೇಶ್ ಸೇರಿದಂತೆ ಇಬ್ಬರು ಪುತ್ರರು ಹಾಗು ಐವರು ಪುತ್ರಿಯರು ಇದ್ದಾರೆ.
ದಿವಂಗತ ಮರಿಸಿದ್ದಯ್ಯನವರು ಕ್ಷೇತ್ರಕ್ಕೆ ವಲಸೆ ಬಂದು ಇಲ್ಲಿಯೇ ನೆಲೆನಿಂತು ತಮ್ಮ ಶ್ರಮದ ಬದುಕಿನ ಮೂಲಕ ಬದುಕು ಕಟ್ಟಿಕೊಂಡವರು. ಅಲ್ಲದೆ ಶ್ರೀರಾಮನಗರ ನಿರ್ಮಾಣ ಮಾಡುವ ಮೂಲಕ ಹಲವು ಸೇವಾ ಕಾರ್ಯಗಳ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ.
ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ಪ್ರಗತಿಪರ ಕೃಷಿಕರಾಗಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದ್ದು, ಅವರ ಬದುಕಿಗೆ ಸ್ಪೂರ್ತಿಯಾಗಿದ್ದ ರಾಚಮ್ಮನವರ ನಿಧನ ಗ್ರಾಮಸ್ಥರಲ್ಲಿ ನೋವುಂಟು ಮಾಡಿದೆ.
ತಾಲೂಕು ಒಕ್ಕಲಿಗರ ಸಂಘ, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗು ಗಣ್ಯರು ರಾಚಮ್ಮನವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.