ಸರ್.ಎಂ.ವಿ ಕಾಲೇಜಿನಲ್ಲಿ “ಸುರಕ್ಷತಾ ಜಾಗೃತಿ, ಕಾನೂನು ಸಾಕ್ಷರತಾ ತರಬೇತಿ” ಕಾರ್ಯಕ್ರಮ
ಭದ್ರಾವತಿ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಹಿಳಾ ಲೈಂಗಿಕ ದೌರ್ಜನ್ಯ ನಿರ್ಮೂಲನಾ ಮತ್ತು ಸಾಂತ್ವನಾ ಕೋಶ ಮತ್ತು ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿ ಅಡಿಯಲ್ಲಿ ಮಹಾಜ್ಞಾನ್ ಇಂಟಲೆಕ್ಚುವಲ್ಸ್ ಪ್ರೈವೆಟ್ ಲಿಮಿಟೆಡ್ ಇವರ ಸಹ ಯೋಗದೊಂದಿಗೆ "ಸುರಕ್ಷತಾ ಜಾಗೃತಿ ಮತ್ತು ಕಾನೂನು ಸಾಕ್ಷರತಾ ತರಬೇತಿ" ಕಾರ್ಯಕ್ರಮ ಕಾಲೇಜಿನ ಆಂತರಿಕ ಗುಣಮಟ್ಟ ಕೋಶ ವತಿಯಿಂದ ಆಯೋಜಿಸಲಾಗಿತ್ತು.
ಭದ್ರಾವತಿ: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಹಿಳಾ ಲೈಂಗಿಕ ದೌರ್ಜನ್ಯ ನಿರ್ಮೂಲನಾ ಮತ್ತು ಸಾಂತ್ವನಾ ಕೋಶ ಮತ್ತು ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ಸಮಿತಿ ಅಡಿಯಲ್ಲಿ ಮಹಾಜ್ಞಾನ್ ಇಂಟಲೆಕ್ಚುವಲ್ಸ್ ಪ್ರೈವೆಟ್ ಲಿಮಿಟೆಡ್ ( Mahajnan intellectuals Private limited) ಇವರ ಸಹ ಯೋಗದೊಂದಿಗೆ "ಸುರಕ್ಷತಾ ಜಾಗೃತಿ ಮತ್ತು ಕಾನೂನು ಸಾಕ್ಷರತಾ ತರಬೇತಿ" ಕಾರ್ಯಕ್ರಮ ಕಾಲೇಜಿನ ಆಂತರಿಕ ಗುಣಮಟ್ಟ ಕೋಶ (IQAC) ವತಿಯಿಂದ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲೆ ಹರ್ಷಿತಾ ರಾಣಿ ಮಹೇಂದ್ರಕ್ ವಿಶೇಷ ಉಪನ್ಯಾಸ ನೀಡಿ,ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿಪರ ವಾತಾವರಣದಲ್ಲಿ ಕಾನೂನಿನ ಅರಿವು, ಹಕ್ಕುಗಳು, ನಾಗರೀಕ ಹಕ್ಕು, ಪೋಕ್ಸೋ (POCSO) ಕಾಯಿದೆ. ಮಹಿಳಾ ದೌರ್ಜನ್ಯ ನಿರ್ಮೂಲನ ಕಾಯಿದೆಗಳ ಬಗ್ಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ಎಸ್ ಹೊಸಳ್ಳೇರ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಮಹಿಳಾ ಲೈಂಗಿಕ ದೌರ್ಜನ್ಯ ನಿರ್ಮೂಲನಾ ಮತ್ತು ಸಾಂತ್ವನಾ ಕೋಶ ಸಂಚಾಲಕರಾದ ಎಸ್.ಕೆ ಡಾ.ಮಾನಸ, ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರಾಧ್ಯಾಪಕರಾದ ಇಂಗ್ಲೀಷ್ ವಿಭಾಗ ಐಕ್ಯೂಎಸಿ ಸಂಚಾಲಕ ಮೊಹಮ್ಮದ್ ನಜೀಬ್ ಮತ್ತು ಇತಿಹಾಸ ವಿಭಾಗ ಐಕ್ಯೂಎಸಿ ಸಹ ಸಂಚಾಲಕ ಅಕ್ರಂ ಪಾಷ, ಮಹಿಳಾ ಲೈಂಗಿಕ ದೌರ್ಜನ್ಯ ನಿರ್ಮೂಲನಾ ಮತ್ತು ಸಾಂತ್ವಾನ ಕೋಶ ಮತ್ತು ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ಸಮಿತಿಯ ಎಲ್ಲಾ ಸದಸ್ಯರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.
ವಿದ್ಯಾರ್ಥಿಗಳಾದ ಎಸ್.ಶಿಲ್ಪ ಮತ್ತು ಸಂಗಡಿಗರು ಪ್ರಾರ್ಥಿಸಿ, ಮೋನಿಷ ಅತಿಥಿ ಪರಿಚಯ ಮಾಡಿಕೊಟ್ಟರು. ಕಾಲೇಜಿನ ಕೆ. ಜನೀಫರ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ, ವಾಣಿಜ್ಯ ಶಾಸ್ತ್ರ ವಿಭಾಗದ POSH ಸಮಿತಿಯ ಸಂಚಾಲಕಿ ಪ್ರೊ. ಟಿ.ಜಿ ಉಮಾ ವಂದಿಸಿದರು.