ಮೇಲ್ವರ್ಗದ ಜಾತಿಯವರಿಂದ ದಲಿತರ ಜಮೀನು ಕಬಳಿಕೆ ಆರೋಪ : ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ

ತಹಸೀಲ್ದಾರ್‌ರವರ ಆದೇಶ ರದ್ದು ಮಾಡಿ, ಇಲ್ಲವಾದಲ್ಲಿ ಅಹೋ ರಾತ್ರಿ ಧರಣಿ ಹೋರಾಟದ ಎಚ್ಚರಿಕೆ 

ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೪ ಎಕರೆ ೦೫ ಗುಂಟೆ ಜಮೀನು ಪರಿಶಿಷ್ಟ ಪಂಗಡ(ಎಸ್.ಟಿ) ದಲಿತ ಸಮುದಾಯಕ್ಕೆ ಸೇರಿದ ನಾಗಪ್ಪ ಬಿನ್ ಮರಿಯಣ್ಣನವರ ಹೆಸರಿಗೆ ಪ್ರಸ್ತುತ ಖಾತೆ ಪಹಣಿ ದಾಖಲಾತಿಗಳಿದ್ದು, ಅವರ ಮರಣ ನಂತರ ಕುಟುಂಬಸ್ಥರಿಗೆ ಪೌತಿ ಖಾತೆ ಮಾಡಲು ಕಾನೂನು ಬದ್ದವಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಹಸೀಲ್ದಾರ್‌ರವರು ದಲಿತ ವಿರೋಧಿ ನೀತಿ ಅನುಸರಿಸಿ ನ್ಯಾಯಲಯದ ಮೂಲಕ ಮೇಲ್ವರ್ಗದ ಜಾತಿಯವರಾದ ಪಾಲಾಕ್ಷಪ್ಪ ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡರಿಗೆ ೨ ಎಕರೆ ೦.೩೯ ಗುಂಟೆ ಜಮೀನನ್ನು ಕಾನೂನು ಬಾಹಿರವಾಗಿ ಖಾತೆ ಪಹಣಿ ಮಾಡಲು ಆದೇಶ ಮಾಡಿರುವುದನ್ನು ರದ್ದು ಪಡಿಸಬೇಕೆಂದು. ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಲಾಯತು. 
    ಭದ್ರಾವತಿ:  ತಾಲೂಕಿನ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೪ ಎಕರೆ ೦೫ ಗುಂಟೆ ಜಮೀನು ಪರಿಶಿಷ್ಟ ಪಂಗಡ(ಎಸ್.ಟಿ) ದಲಿತ ಸಮುದಾಯಕ್ಕೆ ಸೇರಿದ ನಾಗಪ್ಪ ಬಿನ್ ಮರಿಯಣ್ಣನವರ ಹೆಸರಿಗೆ ಪ್ರಸ್ತುತ ಖಾತೆ ಪಹಣಿ ದಾಖಲಾತಿಗಳಿದ್ದು, ಅವರ ಮರಣ ನಂತರ ಕುಟುಂಬಸ್ಥರಿಗೆ ಪೌತಿ ಖಾತೆ ಮಾಡಲು ಕಾನೂನು ಬದ್ದವಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಹಸೀಲ್ದಾರ್‌ರವರು ದಲಿತ ವಿರೋಧಿ ನೀತಿ ಅನುಸರಿಸಿ ನ್ಯಾಯಲಯದ ಮೂಲಕ ಮೇಲ್ವರ್ಗದ ಜಾತಿಯವರಾದ ಪಾಲಾಕ್ಷಪ್ಪ ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡರಿಗೆ ೨ ಎಕರೆ ೦.೩೯ ಗುಂಟೆ ಜಮೀನನ್ನು ಕಾನೂನು ಬಾಹಿರವಾಗಿ ಖಾತೆ ಪಹಣಿ ಮಾಡಲು ಆದೇಶ ಮಾಡಿರುವುದನ್ನು ರದ್ದು ಪಡಿಸಬೇಕೆಂದು. ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಲಾಯತು. 
    ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ದಲಿತ ಮುಖಂಡರು, ಅರಹತೊಳಲು ಗ್ರಾಮದ ಸರ್ವೆ ನಂ.೦೭ರಲ್ಲಿ ಇರುವ ೪ ಎಕರೆ ೦೫ ಗುಂಟೆ ಜಮೀನಿನ ಮಾಲೀಕರಿಂದ ನಾಗಪ್ಪ ಬಿನ್ ಮರಿಯಣ್ಣನವರ ಮರಣ ಹೊಂದಿರುವ ವಿಚಾರ ತಿಳಿದು ಸಂಬಂಧಪಟ್ಟ ಜಮೀನಿನ ವಾರಸುದಾರರಾದ ಹನುಮಂತಪ್ಪ ಬಿನ್ ಲೇಟ್ ಮರಿಯಣ್ಣನವರಿಗೆ ನೋಟಿಸ್ ನೀಡಿರುತ್ತಾರೆ. ಅದರಂತೆ ಹನುಮಂತಪ್ಪನವರು |ಪೌತಿ ಖಾತೆಗೆ ಸಂಬಂಧಪಟ್ಟ ದಾಖಲೆಗಳು ಹಾಗು ವಂಶವೃಕ್ಷದ ಮೂಲಕ ದಿನಾಂಕ: ೨೭-೧೦-೨೦೨೫ರಂದು ಜಂಟಿ ಖಾತೆ ಮಾಡಲು ಹೊಳೆಹೊನ್ನೂರು ನಾಡ ಕಛೇರಿಯ ಮೂಲಕ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸುತ್ತಾರೆ. ಆದರೆ ದಿನಾಂಕ: ೬-೧೧-೨೦೨೫ರಂದು ಅರಹತೋಳಲು ಗ್ರಾಮದ ಸರ್ವೆ ನಂ: ೭ ರಲ್ಲಿ ೪ ಎಕರೆ ೦೫ ಗುಂಟೆ ಜಮೀನಿನ ಪೈಕಿ ೨ ಎಕರೆ ೩೯ ಗುಂಟೆ ಜಮೀನು ಪಾಲಾಕ್ಷಪ್ಪ  ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡನಿಗೆ ಆದ ನನಗೆ ಪಿತ್ರಾರ್ಜಿತವಾಗಿ ಬಂದಿರುತ್ತದೆ ಎಂದು ತಕಾರಾರು ಅರ್ಜಿ ಸಲ್ಲಿಸಿರುತ್ತಾರೆ. ಪೌತಿಖಾತೆಗೆ ಅರ್ಜಿ ಸಲ್ಲಿಸಿರುವ ಹನುಮಂತಪ್ಪನಿಗೂ ಮತ್ತು ಪಾಲಾಕ್ಷಪ್ಪ ಗೌಡ ಜಿ.ಎಸ್ ರವರಿಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ಮೂಲ ಖಾತೆದಾರರಾದ ನಾಗಪ್ಪನವರು ಪರಶಿಷ್ಟ ಪಂಗಡ(ಎಸ್.ಟಿ) ನಾಯಕ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಪಾಲಾಕ್ಷಪ್ಪ ಗೌಡ ಜಿ.ಎಸ್‌ರವರು ಲಿಂಗಾಯತ ಗೌಡ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಜಮೀನು ಕಬಳಿಸುವ ದುರುದ್ದೇಶದಿಂದ ತಕಾರಾರು ಅರ್ಜಿದಾರರಾದ ಪಾಲಾಕ್ಷಪ್ಪ ಗೌಡ ಜಿ.ಎಸ್‌ರವರು ತಮ್ಮ ಕುಟುಂಬದ ಆಸ್ತಿಯನ್ನು ವಿಭಾಗ ಪತ್ರ ಮಾಡಿಕೊಳ್ಳುವ ಸಂದರ್ಭದಲ್ಲಿ ಅರಹತೋಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೨ ಎಕರೆ ೩೯ ಗುಂಟೆ ಜಮೀನು ನಮಗೆ ಪಿತ್ರಾರ್ಜಿತವಾಗಿ ಬಂದಿರುತ್ತದೆ. ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡು ತಹಸೀಲ್ದಾರ್  ನ್ಯಾಯಲಯಕ್ಕೆ ಸಲ್ಲಿಸಿರುತ್ತಾರೆಂದು ದೂರಿದರು. 
    ಮೂಲ ಖಾತೆದಾರನಿಂದ ನಾಗಪ್ಪನವರಾಗಲಿ, ನಾಗಪ್ಪನ ಮಕ್ಕಳಾಗಲಿ ಮತ್ತು ಪ್ರಸ್ತುತ ಪೌತಿ ಖಾತೆಗೆ ಸಲ್ಲಿಸಿರುವ ವಂಶವೃಕ್ಷದ ಸಂಬಂಧಿತ. ವಾರಾಸುದಾರರಾಗಲಿ ಕಾನೂನುಬದ್ದವಾಗಿ ಕ್ರಯ ಮಾಡಿಕೊಟ್ಟಿರುವ ಯಾವುದೇ ಸ್ಪಷ್ಟ ದಾಖಲಾತಿಗಳು ಇರುವುದಿಲ್ಲ ಹಾಗೂ ತಕರಾರು ಸಲ್ಲಿಸಿರುವ ಆರ್.ಆರ್ ೫ ರಲ್ಲಿ ನಮೂದಿಸಿರುವ `ನಾಗಪ್ಪನಿಂದ ಅರಿಯಪ್ಪನಿಂದ ಅಣ್ಣ ಹನುಮಪ್ಪನಿಗೆ ಇತರೆ ಸ್ವತ್ತುಗಳೊಂದಿಗೆ ೩೮೦ ರು. ಗಳಿಗೆ  ಕ್ರಯ ಪ.ರಿ.ನಂ: ೪೨೪ ೧೨/೧೮ ೨೬'ಕ್ಕೆ ತಹಸೀಲ್ದಾರ್‌ರವರ ನ್ಯಾಯಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ನಾಗಪ್ಪನವರಿಗೆ ಯಾವುದೇ ಅಣ್ಣತಮ್ಮಂದಿರುವುದಿಲ್ಲ ಎಂದು ಸ್ಪಷ್ಟವಾದ ವಿ.ಎ ಆರ್.ಐ ರವರಿಂದ ವಂಶವೃಕ್ಷ ಪಡೆಯಲಾಗಿದೆ.  ಪಾಲಾಕ್ಷಪ್ಪ ಗೌಡ ಜಿ.ಎಸ್ ರವರು ದಲಿತ ಕುಟುಂಬರ ಜಮೀನು ಕಬಳಿಸುವ ದುರುದ್ದೇಶದಿಂದ ಸುಳ್ಳು ದಾಖಲೆ ಸ್ಪಷ್ಟಿ ಮಾಡಿಕೊಂಡು ತಕಾರಾರು ಅರ್ಜಿ ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಅಲ್ಲದೆ ಆಸ್ತಿ ಮೇಲಿನ ಋಣಭಾರ ಪತ್ರದಲ್ಲಿ ಪಾಲಾಕ್ಷಪ್ಪ ಗೌಡ ಜಿ.ಎಸ್‌ರವರು ದಿನಾಂಕ: ೨೮-೫-೬೬ ರಂದು ನನಗೆ ವಿಭಾಗ ಪತ್ರದ ಮೂಲಕ ೩ನೇ ಪಾರ್ಟಿಯ ಮೂಲಕ ನನಗೆ ಈ ಆಸ್ತಿಯು ಬಂದಿರುತ್ತದೆ ಎಂದು ಅವರೇ ತಿಳಿಸಿರುತ್ತಾರೆ. ೩ನೇ ಪಾರ್ಟಿಯವರು ನಾಗಪ್ಪನವರ ಅಣ್ಣನೋ ಅಥವಾ ತಮ್ಮನೋ, ವಂಶವೃಕ್ಷದ ವಾರಸುದಾರನೋ ಇದುವರಿಗೂ ತಿಳಿದು ಬಂದಿರುವುದಿಲ್ಲ ಎಂದು ಆರೋಪಿಸಿದರು. 
    ಈ ನಡುವೆ ತಹಸೀಲ್ದಾರ್‌ರವರು ಸಂಬಂಧ ಪಟ್ಟ ಅಧಿಕಾರಿಗಳಿಂದ ನಿಖರವಾದ ಮಾಹಿತಿ ಪಡೆಯದೆ ೪೦-೫೦ ವರ್ಷಗಳಿಂದ ಜಮೀನಿನ ಅನುಭವ ಹೊಂದಿರುವ ಅರ್ಜಿದಾರರಾದ ಹನುಮಂತಪ್ಪ ಮತ್ತು ಅವರ ಸಹೋದರರಿಗೆ ದಲಿತ ಸಮುದಾಯದ ಕುಟುಂಬಸ್ಥರಿಗೆ ಆಧಾರವಾಗಿದ್ದ ಜಮೀನನ್ನು ಕಿತ್ತುಕೊಂಡು ಮೇಲ್ವರ್ಗದ ಸಮುದಾಯದ ಪಾಲಾಕ್ಷಪ್ಪ ಗೌಡ ಜಿ.ಎಸ್ ರವರಿಗೆ ೨ ಎಕರೆ ೩೯  ಗುಂಟೆ ಜಮೀನು (೪.೦೫ ಗುಂಟೆಗೆ) ಖಾತೆ ಮಾಡಲು ನೀಡಿರುವ ಆದೇಶವನ್ನು ತಕ್ಷಣ ರದ್ದು ಪಡಿಸಬೇಕು ಹಾಗೂ ಮೂಲ ಖಾತೆದಾರರ ಹೆಸರಿಗೆ ಜಂಟಿಖಾತೆ ಮಾಡಲು ಆದೇಶ ಮಾಡಬೇಕೆಂದು. ಎಂದು ಉಪವಿಭಾಗಧಿಕಾರಿಗಳಿಗೆ ಆಗ್ರಹಿಸಿದರು.  ತಪ್ಪಿದಲ್ಲಿ ಸಮಿತಿಯಿಂದ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಅಹೋ ರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. 
    ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಿಲ್ಲಾ ಅಂಗವಿಕಲರ ವಿಭಾಗದ ಕಾಣಿಕ್‌ರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಕೆ. ರಂಗನಾಥ್, ತಾಲೂಕು ಸಂಚಾಲಕ ಸಂದೀಪ್ ಆರ್. ಅರಹತೊಳಲು, ನಗರ ಸಂಚಾಲಕ ಎನ್. ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.