ಉದ್ಯಮಿ ಟಿ.ಎಸ್ ಈಶ್ವರನ್ ನಿಧನ
ಟಿ.ಎಸ್ ಈಶ್ವರನ್
ಭದ್ರಾವತಿ: ನಗರದ ಅಂಡರ್‌ಬ್ರಿಡ್ಜ್ ಉಂಬ್ಳೆಬೈಲು ರಸ್ತೆ, ಸಂಜಯ್ ನಗರದ ನಿವಾಸಿ, ಉದ್ಯಮಿ ಟಿ.ಎಸ್ ಈಶ್ವರನ್(೭೦) ಬುಧವಾರ ಬೆಳಗಿನ ಜಾವ ನಿಧನ ಹೊಂದಿದರು.
ಪತ್ನಿ, ನಾಲ್ವರು ಪುತ್ರರು ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಮೀನು ಕೃಷಿ ವ್ಯಾಪಾರ ಆರಂಭಿಸಿದ್ದ ಇವರು ನಂತರದ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯಮವನ್ನಾಗಿಸಿಕೊಂಡು ರಾಜ್ಯದ ವಿವಿಧೆಡೆ ಉತ್ತಮ ಹಾಗು ಆರೋಗ್ಯಕರವಾದ ಮೀನು ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದರು. ಅಲ್ಲದೆ ಸಮಾಜ ಸೇವಕರಾಗಿ ಸಹ ಗುರುತಿಸಿ ಕೊಂಡಿದ್ದರು.
ಇವರ ನಿಧನಕ್ಕೆ ಉದ್ಯಮಿ, ಸಮಾಜ ಸೇವಕ ಎ. ಮಾಧು, ಭದ್ರಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮುರುಗನ್, ಶ್ರೀ ತಿರುಮಲ ಫೌಂಡೇಷನ್ ಪ್ರಶಾಂತ್ ಹಾಗು ಮೀನುಗಾರರ ಬೀದಿ ನಿವಾಸಿಗಳು, ವ್ಯಾಪಾರಿಗಳು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
