ಅಮಲೋಧ್ಭವಿ ಮಾತೆ ದೇವಾಲಯದಲ್ಲಿ ಉಚಿತ ರಕ್ತದಾನ, ಕಣ್ಣಿನ ತಪಾಸಣಾ ಶಿಬಿರ

ಭದ್ರಾವತಿ ನ್ಯೂಟೌನ್ ಅಮಲೋಧ್ಭವಿ ಮಾತೆ ದೇವಾಲಯದಲ್ಲಿ ಸಮಾಜದ ಅಂಚಿಗೆ ತಳ್ಳಲ್ಪಟ್ಟವರ(ನಿರ್ಗತಿಕರ) ವರ್ಷದ ಅಂಗವಾಗಿ ಶಿವಮೊಗ್ಗ ಆಶಾ ಜ್ಯೋತಿ ರಕ್ತ ನಿಧಿ ಹಾಗೂ ವಾಸನ್ ಐ ಕೇರ್ ಸಂಸ್ಥೆ ಸಹಯೋಗದೊಂದಿಗೆ ಉಚಿತ ರಕ್ತದಾನ, ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ : ನಗರದ ನ್ಯೂಟೌನ್ ಅಮಲೋಧ್ಭವಿ ಮಾತೆ ದೇವಾಲಯದಲ್ಲಿ ಸಮಾಜದ ಅಂಚಿಗೆ ತಳ್ಳಲ್ಪಟ್ಟವರ(ನಿರ್ಗತಿಕರ) ವರ್ಷದ ಅಂಗವಾಗಿ ಶಿವಮೊಗ್ಗ ಆಶಾ ಜ್ಯೋತಿ ರಕ್ತ ನಿಧಿ ಹಾಗೂ ವಾಸನ್ ಐ ಕೇರ್ ಸಂಸ್ಥೆ ಸಹಯೋಗದೊಂದಿಗೆ ಉಚಿತ ರಕ್ತದಾನ, ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ಸಮಾಜದಲ್ಲಿ ಪ್ರತಿಯೊಬ್ಬರು ದೀನ-ದಲಿತರು, ನಿರ್ಗತಿಕರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಹೊಂದಬೇಕೆಂಬ ಆಶಯದೊಂದಿಗೆ ಈ ಬಾರಿ ಸಮಾಜದ ಅಂಚಿಗೆ ತಳ್ಳಲ್ಪಟ್ಟವರ ವರ್ಷವೆಂಬ ಧ್ಯೇಯ ವಾಕ್ಯದೊಂದಿಗೆ ವಿಭಿನ್ನ ರೀತಿಯ ಸೇವಾ ಕಾರ್ಯಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಪೈಕಿ ಉಚಿತ ರಕ್ತದಾನ, ಕಣ್ಣಿ ತಪಾಸಣಾ ಶಿಬಿರ ಸಹ ಒಂದಾಗಿದೆ. ಸುಮಾರು ನೂರಕ್ಕೂ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು. 
    ಅಮಲೋದ್ಭವಿ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜಾ, ಕಾರ್ಯದರ್ಶಿ ವಿಲ್ಸನ್, ಆಲ್ಬರ್ಟ್, ಅರುಣ್, ಪೌಲಸ್, ಪಚ್ಛು, ಬಾಬು, ಅಂತೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.