ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ರಸ್ತೆ ದಾಟಲು ಮೇಲ್ಸೇತುವೆ ನಿರ್ಮಿಸಿ

ಜೇಡಿಕಟ್ಟೆ-ಹೊಸೂರು ಗ್ರಾಮಸ್ಥರಿಂದ ಭೂಸ್ವಾಧೀನಾಧಿಕಾರಿಗೆ ಮನವಿ 

ಭದ್ರಾವತಿ ತಾಲೂಕಿನ ಜೇಡಿಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ-೨೦೬ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಜೇಡಿಕಟ್ಟೆ ಮತ್ತು ಹೊಸೂರು ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ವಿಶೇಷ ಭೂಸ್ವಾಧೀನಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 
    ಭದ್ರಾವತಿ : ತಾಲೂಕಿನ ಜೇಡಿಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ-೨೦೬ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಜೇಡಿಕಟ್ಟೆ ಮತ್ತು ಹೊಸೂರು ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ವಿಶೇಷ ಭೂಸ್ವಾಧೀನಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 
    ಈ ಭಾಗದಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ಧರು, ಕಾರ್ಮಿಕರು ಹಾಗು ಗ್ರಾಮಸ್ಥರು ಸಂಚರಿಸುತ್ತಾರೆ. ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿದೆ.  ಈ ಹಿನ್ನಲೆಯಲ್ಲಿ ಮೇಲ್ಸೇತುವೆ ನಿರ್ಮಿಸಿಕೊಡುವುದು. ಅಲ್ಲದೆ ರಸ್ತೆ ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡದಿರುವುದು ಕಂಡು ಬಂದಿದ್ದು, ನೀರು ರಸ್ತೆ ಮೇಲೆ ಹಾಗು ಸಮೀಪದ ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ. ರಸ್ತೆ ಕಾಮಗಾರಿ ಪ್ರಾರಂಭಿಸುವ ಮೊದಲು ಎರಡು ಬದಿ ಚರಂಡಿ ನಿರ್ಮಾಣ ಮಾಡುವಂತೆ ಕೋರಲಾಗಿದೆ. 
    ಈ ಹಿಂದೆ ಈ ಸಂಬಂಧ ಮನವಿ ಸಲ್ಲಿಸಲಾಗಿದ್ದು, ಆದರೆ ಮನವಿಗೆ ಯಾವುದೇ ರೀತಿ ಸ್ಪಂದನೆ ವ್ಯಕ್ತವಾಗಿಲ್ಲ. ತಕ್ಷಣ ತಮ್ಮ ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. 
    ಪ್ರಮುಖರಾದ ಎಸ್. ವಾಗೀಶ್, ಸಿದ್ದಲಿಂಗಯ್ಯ, ಮುಕುಂದರಾವ್, ಪ್ರಭಾ, ದೇವರಾಜ, ಸಿಂಚನ, ಎನ್. ಧನರಾಜ್, ಜಗದೀಶ್, ಸತ್ಯನಾರಾಯಣರಾವ್, ಜೆ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.