ಶತಾಯುಷಿ ಜವರಯ್ಯ ನಿಧನ

ಜವರಯ್ಯ
   ಭದ್ರಾವತಿ: ಕುಣಿಗಲ್ ತಾಲೂಕಿನ ಎಡೆಯೂರು ಗ್ರಾಮದ ನಿವಾಸಿ, ಶತಾಯುಷಿ ಜವರಯ್ಯ ಶನಿವಾರ ನಿಧನ ಹೊಂದಿದರು.
   ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಎಡೆಯೂರು ಗ್ರಾಮದ ಅವರ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ನೆರವೇರಿತು.
   ಜವರಯ್ಯ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ, ಪತ್ರಕರ್ತ ಅನಂತಕುಮಾರ್ ರವರ ತಾತ. ಇವರ ನಿಧನಕ್ಕೆ ನಗರದ ಗಣ್ಯರು, ಎಡೆಯೂರಿನ ಪ್ರಮುಖರು ಸಂತಾಪ ಸೂಚಿಸಿದ್ದಾರೆ.