ಆದರ್ಶ, ತತ್ವ, ಮೌಲ್ಯಗಳ ಆಚರಣೆ ಕೇವಲ ಮಾತಿಗೆ ಸೀಮಿತ : ಶ್ರೀ. ಷ.ಬ್ರ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ

ಭದ್ರಾವತಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ೬೭೪ನೇ ವಚನ ಮಂಟಪದ ಬಿ.ಎಚ್ ಮಹಾದೇವಪ್ಪ ಮತ್ತು ಸಹೋದರರು ಹಾಗು ಮಕ್ಕಳು ಕುಟುಂಬದ ದತ್ತಿ ಮಾದಮ್ಮ ಮತ್ತು ಲಿಂ.ಬನ್ನಿಹಟ್ಟಿ ಹಾಲಪ್ಪ ಮಹಾದೇವಪ್ಪ ದತ್ತಿ ಕಾರ್ಯಕ್ರಮ ಹಿರಿಯ ಸಮಾಜ ಸೇವಕ ಹೆಬ್ಬಂಡಿ ಶಿವರುದ್ರಪ್ಪ, ಚನ್ನಗಿರಿ ಶ್ರೀ ಕೇದಾರ ಶಾಖಾ ಹಿರೇಮಠದ ಶ್ರೀ ಷ.ಬ್ರ. ಡಾ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳವರು ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಆದರ್ಶ, ತತ್ವ, ಮೌಲ್ಯಗಳ ಆಚರಣೆಗಳ ಬಗ್ಗೆ ನಾವುಗಳು ಇಂದು ಕೇವಲ ಮಾತನಾಡುವುದು ಜೀವನವನ್ನಾಗಿಸಿದ್ದೇವೆ ಹೊರತು ನುಡಿದಂತೆ ನಡೆಯುತ್ತಿಲ್ಲ. ಇದರಿಂದಾಗಿ ಸಮಾಜದಲ್ಲಿ ಆಶಾಂತಿ ನಿರ್ಮಾಣವಾಗುತ್ತಿದೆ ಎಂದು ಚನ್ನಗಿರಿ ಶ್ರೀ ಕೇದಾರ ಶಾಖಾ ಹಿರೇಮಠದ ಶ್ರೀ ಷ.ಬ್ರ. ಡಾ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳವರು ಹೇಳಿದರು. 
    ಶ್ರೀಗಳು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ೬೭೪ನೇ ವಚನ ಮಂಟಪದ ಬಿ.ಎಚ್ ಮಹಾದೇವಪ್ಪ ಮತ್ತು ಸಹೋದರರು ಹಾಗು ಮಕ್ಕಳು ಕುಟುಂಬದ ದತ್ತಿ ಮಾದಮ್ಮ ಮತ್ತು ಲಿಂ.ಬನ್ನಿಹಟ್ಟಿ ಹಾಲಪ್ಪ ಮಹಾದೇವಪ್ಪ ದತ್ತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ನಾವುಗಳು ಬಸವಾದಿ ಶಿವಶರಣರ ವಚನಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಕಾಯಕವನ್ನು ತನು, ಮನ, ಶುಧ್ಧದಿಂದ ಮಾಡಿದಾಗ ಎಲ್ಲರ ಬದುಕು ಹಸನಾಗುತ್ತದೆ ಎಂದರು. 
    ಶಿವಮೊಗ್ಗ ಜಿ.ಎಸ್.ಎಸ್ ಪ್ರತಿಷ್ಠಾನದ ಅಧ್ಯಕ್ಷೆ ಪ್ರೂ. ಕಿರಣ್ ದೇಸಾಯಿ ಉಪನ್ಯಾಸಕರಾಗಿ ಆಗಮಿಸಿ ಶಿವಶರಣೆಯರ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡಿ, ಆದರ್ಶ ಜೀವನ ಕುರಿತು ಮಾತನಾಡುವುದು ಸುಲಭ. ಆದರೆ ಅದನ್ನು ಆಚರಣೆ ಮಾಡುವುದು ಕಷ್ಟ. ಮೌಲ್ಯ ಎಂಬುದು ಜೀವನ ಪೂರ್ತಿ ಕಾಪಾಡಿಕೊಂಡು ನಡೆಯುವಂತಹದ್ದು. ವರ್ಷಗಳ ಅಂಕಿ, ಸಂಖ್ಯೆಗಳು ಬದಲಾಗಬಹುದು ಆದರೆ ಜೀವನದ ಆದರ್ಶಗಳು ಬದಲಾಗಬಾರದು. ಮಹಿಳೆಯರನ್ನು ಎರಡನೇ ದರ್ಜೆ ನಾಗರೀಕರಂತೆ ಕಾಣುತ್ತಿದ್ದ ಕಾಲಘಟ್ಟದಲ್ಲಿ ಶಿವಶರಣೆಯರು ಬದುಕಿಗೆ ಉನ್ನತ ಆದರ್ಶ ಮೌಲ್ಯಗಳನ್ನು ತಂದು ಕೊಟ್ಟವರು. ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರು ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದರು. 
    ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಮಾತನಾಡಿ, ೧೨ನೇ ಶತಮಾನದಲ್ಲಿ ವಚನ ಮಂಟಪದ ನಿರ್ಮಾಣದಲ್ಲಿ ಶರಣರಿಗಿಂತ ಶರಣೆಯರ ಕೊಡುಗೆ ಹಾಗು ಚನ್ನಬಸವಣ್ಣನವರ ಪಾತ್ರ ಅತಿ ಹೆಚ್ಚಿನದ್ದು ಹಾಗು ಮೌಲ್ಯಯುತವಾದದ್ದು. ಇವರು ಬೌಧ್ಧಿಕ ಬೆಳವಣಿಗೆಯ ಕಾರಣರಾದರು. ಬಸವಣ್ಣನವರನ್ನು ಬೆಳೆಸಿ ಅವರ ವ್ಯಕ್ತಿತ್ವಕ್ಕೆ ಹೊಳಪು ನೀಡುವಲ್ಲಿ ಅವರ ಅಕ್ಕ ಅಕ್ಕನಾಗಲಾಂಬಿಕೆ ಶ್ರಮ ಮಹತ್ವದ್ದಾಗಿದೆ ಎಂದರು.  ಹೊಳಪು, ಶಕ್ತಿಯನ್ನು ನೀಡಿದವರು.
    ಕೇವಲ ನಾವು ಬೆಳೆಯುವುದಲ್ಲ ಇತರರನ್ನು ಸಹ ಬೆಳೆಯುವಂತೆ ಮಾಡುವ ಗುಣ ಹೊಂದಿರಬೇಕು. ನಮ್ಮ ಸಮುದಾಯದ ಜೊತೆಗೆ ಇತರ ಸಮುದಾಯವನ್ನು ಸಹ ಬೆಳೆಸುವ ಸಾಮರ್ಥ್ಯ ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ೧೨ನೇ ಶತಮಾನದಲ್ಲಿ ನಡೆದ ಚುಳವಳಿಗಳು ಜಗತ್ತಿಗೆ ಮಾದರಿಯಾಯಿತು ಎಂದರು. 
      ಹಿರಿಯ ಸಮಾಜ ಸೇವಕ ಹೆಬ್ಬಂಡಿ ಶಿವರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಎಂ.ಮನು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕದಳಿ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು. ನಂದಿನಿ ಸ್ವಾಗತಿಸಿ, ಗಂಗಾ ಕುಬ್ಸದ್ ಪ್ರ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜಶೇಖರಪ್ಪ ವಂದಿಸಿ, ಮಲ್ಲಿಕಾಂಬ ಕಾರ್ಯಕ್ರಮ ನಿರೂಪಿಸಿದರು.