ಪ್ರಪಂಚದ ಪ್ರಪ್ರಥಮ ಮಹಿಳಾ ವಚನಕಾರ್ತಿ ಶ್ರೀ ಅಕ್ಕಮಹಾದೇವಿ ಜಯಂತಿ ತಾಲೂಕು ಮಟ್ಟದಲ್ಲಿ ಆಚರಿಸಿ
ಶ್ರೀ ಅಕ್ಕಮಹಾದೇವಿ ಬಳಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ
ಪ್ರಪಂಚದ ಪ್ರಪ್ರಥಮ ಮಹಿಳಾ ವಚನಕಾರ್ತಿ, ವೀರವಿರಾಗಿಣಿ ಮಹಾನ್ ಶಿವಶರಣೆ ಶ್ರೀ ಅಕ್ಕಮಹಾದೇವಿಯವರ ಜಯಂತಿಯನ್ನು ತಾಲೂಕು ಮಟ್ಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ಆಚರಿಸಲು ಆದೇಶಿಸುವಂತೆ ಭದ್ರಾವತಿ ಹಳೇನಗರ ಶ್ರೀ ಬಸವೇಶ್ವರ ವೃತ್ತದ ಶ್ರೀ ಅಕ್ಕಮಹಾದೇವಿ ಬಳಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಪ್ರಪಂಚದ ಪ್ರಪ್ರಥಮ ಮಹಿಳಾ ವಚನಕಾರ್ತಿ, ವೀರವಿರಾಗಿಣಿ ಮಹಾನ್ ಶಿವಶರಣೆ ಶ್ರೀ ಅಕ್ಕಮಹಾದೇವಿಯವರ ಜಯಂತಿಯನ್ನು ತಾಲೂಕು ಮಟ್ಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ಆಚರಿಸಲು ಆದೇಶಿಸುವಂತೆ ಹಳೇನಗರ ಶ್ರೀ ಬಸವೇಶ್ವರ ವೃತ್ತದ ಶ್ರೀ ಅಕ್ಕಮಹಾದೇವಿ ಬಳಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಭಾರತ ದೇಶದ ಆಧ್ಯಾತ್ಮಿಕ ಲೋಕದಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಾದಿಯಾಗಿ ಎಲ್ಲಾ ಶರಣರ, ಶರಣೆಯರ ಅಕ್ಕನಾಗಿ ಸ್ಥುತಿಸಲ್ಪಟ್ಟ ವೀರ ವೈರಾಗ್ಯನಿಧಿ ಶ್ರೀ ಅಕ್ಕಮಹಾದೇವಿಯವರ ಜಯಂತಿಯನ್ನು ರಾಜ್ಯ ಸರ್ಕಾರ ರಾಜ್ಯಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ಆಚರಿಸುತ್ತಿರುವುದು ಈ ನಾಡಿನ ಎಲ್ಲರಿಗೂ ಸಂತಸದ ವಿಷಯವೇ ಆಗಿದೆ. ಬಸವಾಭಿಮಾನಿಗಳಾದ, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಶ್ರೀ ಅಕ್ಕಮಹಾದೇವಿಯವರ ಜಯಂತ್ಯೋತ್ಸವವನ್ನು ೨ ಏಪ್ರಿಲ್ ೨೦೨೬ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಗೌರವಾದರಗಳೊಂದಿಗೆ ಆಚರಿಸಲು ವ್ಯವಸ್ಥೆ ಕೈಗೊಳ್ಳಬೇಕಾಗಿ ಹಾಗು ಈ ಸಂಬಂಧ ತುರ್ತಾಗಿ ಸರ್ಕಾರದ ಆದೇಶ ಹೊರಡಿಸುವಂತೆ ಕೋರಲಾಗಿದೆ.
ಪ್ರತಿ ವರ್ಷ ಶ್ರೀ ಅಕ್ಕಮಹಾದೇವಿ ಜಯಂತಿ ಆಚರಿಸುವ ಮೂಲಕ ಯುವ ಪೀಳಿಗೆಗೆ ಶ್ರೀ ಅಕ್ಕಮಹಾದೇವಿಯವರ ಜೀವನ ಚರಿತ್ರೆ ತಿಳಿಸಿಕೊಡುವ ಕಾರ್ಯ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಆಚರಣೆ ಮಾಡುವುದು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಲಿದೆ ಎಂದು ಮನವರಿಕೆ ಮಾಡಲಾಗಿದೆ.
ಶ್ರೀ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್, ಸಂಚಾಲಕ ಟಿ.ಜಿ ಬಸವರಾಜಯ್ಯ, ಕಾರ್ಯದರ್ಶಿ ಗಂಗಾಕುಬ್ಸದ್, ಸೋಮಣ್ಣ, ರತ್ನಮ್ಮ, ಕೆ.ಎಸ್ ಯಶೋಧ, ವೈ.ಬಿ ನಂದಿನಿ, ಅನಿತ ಬಸವರಾಜಯ್ಯ, ಆರ್. ಸುಮಾ, ಜ್ಯೋತಿ, ಶಿವಲೀಲ, ಸದಾನಂದ, ಬಸವಜ್ಯೋತಿ, ಶುಭ, ಆರ್. ಗುರುಪ್ರಸಾದ್, ಎಂ. ರಾಜು, ವಿಭುವನ್, ಪ್ರಭು, ಭವನ್ ಎಸ್. ಕುಮಾರ್, ಜಿ. ಮಾನಸ, ಆರ್. ಐಶ್ವರ್ಯ, ಹೇಮಾ, ನಾಗರಾಜಪ್ಪ, ಮಮತ, ಪ್ರವೀಣ್, ಶಾರದ, ಶಿವಾನಂದ್, ಚನ್ನಬಸಪ್ಪ, ರೇಖಾಕವಿ, ಆಶಾ, ಸುಮಿತ್ರ, ಭೂಮಿಕ, ತೀರ್ಥೇಶ್, ರಾಜಶೇಖರ್, ಪ್ರಭುದೇವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.