ಶಿವಾಜಿ ಮಹಾರಾಜರ ಕುರಿತ ಪುಸ್ತಕಗಳನ್ನು ಮಕ್ಕಳಿಗೆ ನೀಡಿ : ಬಿ.ಕೆ ಮೋಹನ್

ಭದ್ರಾವತಿಯಲ್ಲಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತಿ ಕಾರ್ಯಕ್ರಮ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ : ಶಿವಾಜಿ ಮಹಾರಾಜರ ತತ್ವ, ಚಿಂತನೆಗಳು ಹಾಗೂ ಅವರ ಪ್ರತಿ ಹೆಜ್ಜೆಯನ್ನು ಮುಂದಿನ ಪೀಳಿಗೆಗೆ ನಾವು ತಿಳಿಸಬೇಕಿದೆ. ಶಿವಾಜಿ ಮಹಾರಾಜರ ಕುರಿತ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕರೆ ನೀಡಿದರು.
    ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಮರಾಠ ಸಮಾಜದ ಪ್ರಮುಖರಾದ ರೈತ ಮುಖಂಡ ಯಶವಂತರಾವ್ ಘೋರ್ಪಡೆ, ಮೈದೊಳಲು ಹಾಲೇಶ್ ರಾವ್, ಎಚ್.ಆರ್ ಲೋಕೇಶ್ವರ್ ರಾವ್, ಪ್ರಕಾಶ್‌ರಾವ್, ಕವಿತಾ ರಾವ್, ಸಚಿನ್ ಸಿಂಧ್ಯಾ ಸೇರಿದಂತೆ ಇನ್ನಿತರರು ಮಾತನಾಡಿ, ಭಾರತ ದೇಶದ ಅತ್ಯಂತ ಪ್ರಮುಖ ರಾಜರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು ಧೈರ್ಯ, ಶೌರ್ಯಕ್ಕೆ ಅವರು ಮಾದರಿಯಾಗಿದ್ದಾರೆ. ಸಂಘಟಿತ ನೌಕಾಪಡೆಯನ್ನು ನಿರ್ಮಿಸಿದ ಮಹಾನ್ ಯೋಧರಾಗಿದ್ದು, ಆದರ್ಶಪುರುಷರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಸಂದೇಶಗಳನ್ನು, ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
    ಉಪ ತಹಸೀಲ್ದಾರ್ ಮಂಜನಾಯ್ಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಮರಾಠ ಸಮಾಜದ ಅಧ್ಯಕ್ಷ ಎಚ್.ಎಲ್ ರಂಗನಾಥರಾವ್ ಚೌವ್ಹಾಣ್, ತಾ.ಪಂ. ಮಾಜಿ ಸದಸ್ಯ ತಿಪ್ಪೇಶ್ ರಾವ್, ಆರ್‌ಎನ್‌ಟಿ ನಾಗರಾಜರಾವ್, ಸರೋಜಬಾಯಿ, ರಾಮನಾಥ ಬರ್ಗೆ,  ಮಲ್ಲೇಶ್‌ರಾವ್, ಧನುಷ್‌ಭೋಸ್ಲೆ, ಬಾರಂದೂರು ಕಿರಣ್‌ರಾವ್, ನಗರಸಭೆ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಕೋಟೇಶ್ವರ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.