ಮಾಜಿ ಮುಖ್ಯಮುಂತ್ರಿ ಬಿ.ಎಸ್ ಯಡಿಯೂರಪ್ಪ ಜನ್ಮದಿನ : ಶುಭ ಹಾರೈಸಿ ಆಶೀರ್ವದಿಸಿದ ಬಿಳಿಕಿ ಶ್ರೀ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಶುಕ್ರವಾರ ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠ ಪೀಠಾಧ್ಯಕ್ಷರು, ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹ ಕಾರ್ಯದರ್ಶಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಜನ್ಮ ದಿನದ ಶುಭ ಕೋರುವ ಮೂಲಕ ಆಶೀರ್ವದಿಸಿದರು. 
    ಭದ್ರಾವತಿ : ದೀನ ದಲಿತರ, ಬಡವರ ಬಂಧು, ರೈತ ನಾಯಕ, ಹೋರಾಟಗಾರ, ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಶುಕ್ರವಾರ ತಾಲೂಕಿನ ಬಿಳಿಕಿ ಹಿರೇಮಠ ಪೀಠಾಧ್ಯಕ್ಷರು, ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹ ಕಾರ್ಯದರ್ಶಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಜನ್ಮ ದಿನದ ಶುಭ ಕೋರುವ ಮೂಲಕ ಆಶೀರ್ವದಿಸಿದರು. 
    ಶಿಕಾರಿಪುರಕ್ಕೆ ತೆರಳಿದ ಶ್ರೀಗಳು ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಯಡಿಯೂರಪ್ಪನವರಿಗೆ ಭಗವಂತ ದೀರ್ಘಾಯುಷ್ಯ, ಆರೋಗ್ಯವನ್ನು ಕರುಣಿಸಲೆಂದು ಪ್ರಾರ್ಥಿಸಿದರು.
    ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ,  ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ಪಕ್ಷದ ಮುಖಂಡರು, ಗಣ್ಯರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.