ದಂಪತಿ ಆತ್ಮಹತ್ಯೆ ಪ್ರಕರಣ : ಅನಾಥರಾದ ಇಬ್ಬರು ಹೆಣ್ಣು ಮಕ್ಕಳು

ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಅಪಪ್ರಚಾರ ಆರೋಪ 

ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭದ್ರಾವತಿ ಹೊಸಸಿದ್ದಾಪುರ ನಿವಾಸಿ ಸ್ವಾತಿ. 
    ಭದ್ರಾವತಿ : ದಂಪತಿ ಆತ್ಮಹತ್ಯೆಯಿಂದಾಗಿ ಮಕ್ಕಳು ಅನಾಥರಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಅಲ್ಲದೆ ಆತ್ಮಹತ್ಯೆ ಪ್ರಕರಣ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. 
    ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದಲ್ಲಿ ಶಿವರಾತ್ರಿ ಹಬ್ಬದ ದಿನದದಂದು ಕೆಎಸ್‌ಐಎಫ್‌ಎಸ್ ಡಿ' ದರ್ಜೆ  ನೌಕರ ಜಗದೀಶ್ ಮನೆಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದೂರು ದಾಖಲಾಗಿತ್ತು.  ಈ ನಡುವೆ ಇವರ ಪತ್ನಿ ಸ್ವಾತಿ(೨೬) ಸಹ ಅವರ ಮನೆಯಲ್ಲೇ ಶುಕ್ರವಾರ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. 
    ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸ್ವಾತಿ, ಘಟನೆಗೂ ಮೊದಲು ತನ್ನ ತಾಯಿಗೆ ಕಳುಹಿಸಿದ ವಾಟ್ಸಪ್‌ನಲ್ಲಿ ಮೆಸೇಜ್ ಕಳುಹಿಸಿರುವುದು ಪ್ರಕರಣಕ್ಕೆ ತಿರುವು ನೀಡಿದೆ. ಮೆಸೇಜ್‌ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದರು ಎಂದು ಸ್ವಾತಿ ಆರೋಪಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ. 
ದಂಪತಿ ಆತ್ಮಹತ್ಯೆಯಿಂದಾಗಿ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಅನಾಥರಾಗಿರುವುದು ಹೊಸಸಿದ್ದಾಪುರದ ನಿವಾಸಿಗಳಲ್ಲಿ ನೋವುಂಟು ಮಾಡಿದೆ.