ನೆಕ್ಸ್ಟ್ ಜೆನ್ ಇಂಡೋರ್ ಕ್ರಿಕೆಟ್ ಅಕಾಡೆಮಿಗೆ ಚಾಲನೆ
ಕ್ರಿಕೆಟ್ ಆಸಕ್ತ ಮುಂದಿನ ಯುವ ಪೀಳಿಗೆಯ ಕ್ರೀಡಾಪಟುಗಳಿಗೆ ಅಗತ್ಯಕ್ಕೆ ಅನುಗುಣವಾಗಿ ತರಬೇತಿ ನೀಡಲು ಭದ್ರಾವತಿಯಲ್ಲಿ ಸುಸಜ್ಜಿತವಾದ ನೆಕ್ಸ್ಟ್ ಜೆನ್ ಇಂಡೋರ್ ಕ್ರಿಕೆಟ್ ಅಕಾಡೆಮಿಗೆ ಗುರುವಾರ ಚಾಲನೆ ನೀಡಲಾಯಿತು.
ಭದ್ರಾವತಿ : ಕ್ರಿಕೆಟ್ ಆಸಕ್ತ ಮುಂದಿನ ಯುವ ಪೀಳಿಗೆಯ ಕ್ರೀಡಾಪಟುಗಳಿಗೆ ಅಗತ್ಯಕ್ಕೆ ಅನುಗುಣವಾಗಿ ತರಬೇತಿ ನೀಡಲು ಸುಸಜ್ಜಿತವಾದ ನೆಕ್ಸ್ಟ್ ಜೆನ್ ಇಂಡೋರ್ ಕ್ರಿಕೆಟ್ ಅಕಾಡೆಮಿಗೆ ಗುರುವಾರ ಚಾಲನೆ ನೀಡಲಾಯಿತು.
ನಗರದ ಸಿ.ಎನ್ ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಬ್ಲಾಕ್-೧೧ರಲ್ಲಿ ಅಕಾಡೆಮಿ ಆರಂಭಗೊಂಡಿದ್ದು, ಅಕಾಡೆಮಿ ವರ್ಷ ಪೂರ್ತಿ ಕಾರ್ಯ ನಿರ್ವಹಿಸಲಿದ್ದು, ೫ ವರ್ಷ ಮೇಲ್ಪಟ್ಟ ಬಾಲಕ ಹಾಗು ಬಾಲಕಿಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ತರಬೇತಿ ನೀಡಲಾಗುತ್ತದೆ. ವೃತಿಪರ ತರಬೇತಿದಾರರಿಂದ ತರಬೇತಿ, ಬೋಲಿಂಗ್ ಮೆಷಿನ್, ಗುಂಪು ತರಬೇತಿ, ಒನ್ ಟು ಒನ್ ತರಬೇತಿ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ತರಬೇತಿ ಬೆಳಿಗ್ಗೆ ೭ ಗಂಟೆಯಿಂದ ೮.೩೦ರ ವರೆಗೆ ಹಾಗು ಸಂಜೆ ೪ ರಿಂದ ೬ ಗಂಟೆವರೆಗೆ ನಡೆಯಲಿದೆ. ಕ್ರಿಕೆಟ್ ಆಸಕ್ತರು ಇದರ ಸದುಪಯೋಗಪಡೆದುಕೊಳ್ಳುವಂತೆ ಆಕಾಡೆಮಿ ಮಾಲೀಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೮೧೪೭೧೬೩೫೦೯ ಅಥವಾ ೯೦೧೯೭೯೩೯೨೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು, ಕ್ರಿಕೆಟ್ ತರಬೇತಿದಾರರು, ಕ್ರಿಕೆಟ್ ಆಸಕ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
.jpg)