ಪತಿ ಆಯ್ತು ಈಗ ಹೆಂಡತಿಯೂ ನಗರಸಭೆ ಸ್ಥಾಯಿ ಅಧ್ಯಕ್ಷೆ
ಕೆ.ಪಿ ಪ್ರೇಮಾ
ಭದ್ರಾವತಿ : ನಗರಸಭೆ ಉಳಿದ ಅವಧಿಗೆ ೨೩ನೇ ವಾರ್ಡ್ ಸದಸ್ಯೆ ಕೆ.ಪಿ ಪ್ರೇಮಾ ಆಯ್ಕೆಯಾಗಿದ್ದು, ಫೆ.೧೭ರ ಮಂಗಳವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ.
ಮೊದಲ ಬಾರಿಗೆ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿರುವ ಕೆ.ಪಿ ಪ್ರೇಮಾ ಮೊದಲ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗುತ್ತಿದ್ದಾರೆ. ಈ ಹಿಂದೆ ಇವರ ಪತಿ, ಛಲವಾದಿಗಳ ಸಮಾಜದ(ಪರಿಶಿಷ್ಟ ಜಾತಿ) ಮಾಜಿ ಅಧ್ಯಕ್ಷ ಬದರಿನಾರಾಯಣರವರು ೨ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಇವರ ಪತ್ನಿ ಅಧ್ಯಕ್ಷರಾಗುತ್ತಿರುವುದು ವಿಶೇಷವಾಗಿದೆ.
ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿದಿದ್ದು, ಇನ್ನೇನು ಕೆಲವೇ ಕೆಲವು ತಿಂಗಳು ಬಾಕಿ ಉಳಿದಿವೆ. ಶಾಸಕ ಬಿ.ಕೆ ಸಂಗಮೇಶ್ವರ್ ತೀರ್ಮಾನದಂತೆ ಕೆ.ಪಿ ಪ್ರೇಮಾ ಅವರನ್ನು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸೈಯದ್ ರಿಯಾಜ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.