೪೬ ನಿರ್ಗತಿಕ ಕುಟುಂಬಗಳಿಗೆ ಮಾಸಿಕ ಆರ್ಥಿಕ ನೆರವು, ೪ ಬಡ ಮಹಿಳೆಯರಿಗೆ ಬಟ್ಟೆ ಕಿಟ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಭದ್ರಾವತಿ ಯೋಜನಾ ಕಛೇರಿ-೧ರ ವ್ಯಾಪ್ತಿಯ ನಿರ್ಗತಿಕ ಕುಟುಂಬಗಳಿಗೆ ಮಾಸಿಕ ಆರ್ಥಿಕ ನೆರವು ಹಾಗು ಬಡ ಮಹಿಳೆಯರಿಗೆ ಬಟ್ಟೆ ಕಿಟ್‌ಗಳನ್ನು ವಿತರಿಸಲಾಯಿತು. 
    ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿ-೧ರ ವ್ಯಾಪ್ತಿಯ ನಿರ್ಗತಿಕ ಕುಟುಂಬಗಳಿಗೆ ಮಾಸಿಕ ಆರ್ಥಿಕ ನೆರವು ಹಾಗು ಬಡ ಮಹಿಳೆಯರಿಗೆ ಬಟ್ಟೆ ಕಿಟ್‌ಗಳನ್ನು ವಿತರಿಸಲಾಯಿತು. 
    ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಯೋಜನಾ ಕಛೇರಿ-೧ ವ್ಯಾಪ್ತಿಯ ೪೬ ನಿರ್ಗತಿಕ ಕುಟುಂಬಗಳಿಗೆ ಪ್ರತಿ ತಿಂಗಳು ೧ ಸಾವಿರ ರು. ಆರ್ಥಿಕ ನೆರವು ನೀಡಲಾಗುತ್ತಿದ್ದು, ಪ್ರಸ್ತುತ ೪ ಜನ ಬಡಮಹಿಳೆಯರನ್ನು ಗುರುತಿಸಿ ಬಟ್ಟೆ ಕಿಟ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದ ಮಲ್ಲಮ್ಮ ಹಾಗೂ ಬಿ. ಜ್ಯೋತಿ ಹಾಗೂ ಆನೆಕೊಪ್ಪ ಗ್ರಾಮದ ಸರೋಜಮ್ಮ ಮತ್ತು ಕಂಬದಾಳು ಹೊಸೂರು ಗ್ರಾಮದ ಗೌರಮ್ಮ ಅವರಿಗೆ ಬಟ್ಟೆ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. 
    ತಾಲೂಕು ಯೋಜನಾಧಿಕಾರಿ ಪ್ರಕಾಶ್ .ವೈ, ಕಾಳಿಂಗನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ, ವೆಂಕಟೇಶ್ ಹಾಗೂ ಯೋಗೀಶ್, ಜ್ಞಾನವಿಕಾಸ ಸಮನ್ವಯಧಿಕಾರಿ ನೇತ್ರಾವತಿ, ಸೇವಾ ಪ್ರತಿನಿಧಿ ದುರ್ಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.