ಶಿವ ಭಕ್ತರ ಮನಸೂರೆಗೊಳಿಸಿದ `ಸಂಸ್ಕೃತಿ ವೈಭವ'
ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ಯೋಜನೆಯಡಿಯಲ್ಲಿ ಅಪರಂಜಿ ಅಭಿನಯ ಶಾಲೆ ಆಶ್ರಯದಲ್ಲಿ ಶ್ರೀ ನಟರಾಜ ಕಲಾ ವೇದಿಕೆ ಕಲಾ ತಂಡದಿಂದ ಮಹಾಶಿವರಾತ್ರಿ ಹಬ್ಬದಂದು ಭದ್ರಾವತಿ ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ `ಸಂಸ್ಕೃತಿ ವೈಭವ' ಆಯೋಜಿಸಲಾಗಿತ್ತು.
ಭದ್ರಾವತಿ : ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದಂದು ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಸಹ `ಸಂಸ್ಕೃತಿ ವೈಭವ' ಶಿವ ಭಕ್ತರ ಮನ ಗೆದ್ದಿತು.
ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ಯೋಜನೆಯಡಿಯಲ್ಲಿ ಅಪರಂಜಿ ಅಭಿನಯ ಶಾಲೆ ಆಶ್ರಯದಲ್ಲಿ ಶ್ರೀ ನಟರಾಜ ಕಲಾ ವೇದಿಕೆ ಕಲಾ ತಂಡದಿಂದ ಆಯೋಜಿಸಲಾಗಿದ್ದ `ಸಂಸ್ಕೃತಿ ವೈಭವ'ದಲ್ಲಿ ಕಲಾವಿದರಿಂದ `ಕ್ರಾಂತಿಯೋಗಿ ಬಸವಣ್ಣ' ನಾಟಕ ಪ್ರದರ್ಶನ ಹಾಗು ಮಕ್ಕಳಿಂದ ವೇಷ ಭೂಷಣ ಮತ್ತು ನೃತ್ಯ ಗಾಯನ ಭಕ್ತರ ಮನಸೂರೆಗೊಳಿಸಿತು.
ಅಪರಂಜಿ ಅಭಿನಯ ಶಾಲೆಯ ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ಹಾಗು ಜನ್ನಾಪುರ ದೇವಾಲಯಗಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹಿರಿಯ ಸಮಾಜ ಸೇವಕರಾದ ಎಚ್.ವಿ ಶಿವರುದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಸ್ವಪ್ನ ತೇಲ್ಕರ್ ಕಾರ್ಯಕ್ರಮ ನಿರೂಪಿಸಿ, ಚಂದ್ರಪ್ಪ ವಂದಿಸಿದರು.