ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ರಾಯರ ವರ್ಧಂತಿ ಉತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಮಂಗಳವಾರ ರಾಯರ ವರ್ಧಂತಿ ಉತ್ಸವ ಜರುಗಿತು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಮಂಗಳವಾರ ರಾಯರ ವರ್ಧಂತಿ ಉತ್ಸವ ಜರುಗಿತು. 
    ಬೆಳಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ ಹಾಗೂ ಪ್ರಕಾರದಲ್ಲಿ ರಥೋತ್ಸವ ಹಾಗೂ ಕನಕ ಅಭಿಷೇಕ ಮತ್ತು ಪಾದಪೂಜೆ ನೆರವೇರಿತು. ಶ್ರೀ ಗೋಪಾಲ ಆಚಾರ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. 
    ಕೊಟ್ಟೂರು ಸತ್ಯನಾರಾಯಣಚಾರ್, ಶ್ರೀನಿವಾಸ, ಸುಧೀಂದ್ರ, ಮಾಧುರಾವ್, ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ, ಖಜಾಂಚಿ ನಿರಂಜನಚಾರ್ ಹಾಗೂ ಶುಭ ಗುರುರಾಜ್ ಮತ್ತು ಎಲ್ಲಾ ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು.