ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪರಮೇಶ್, ಉಪಾಧ್ಯಕ್ಷರಾಗಿ ಎನ್. ಶ್ರೀನಿವಾಸ್
ಪರಮೇಶ್
ಭದ್ರಾವತಿ : ನಗರದ ಅಪ್ಪರ್ ಹುತ್ತಾ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಲೋಯರ್ ಹುತ್ತಾ ನಿವಾಸಿ ಪರಮೇಶ್ ಮತ್ತು ಉಪಾಧ್ಯಕ್ಷರಾಗಿ ಹುತ್ತಾ ಕಾಲೋನಿ ನಿವಾಸಿ ಎನ್. ಶ್ರೀನಿವಾಸ್ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಒಟ್ಟು ೧೪ ನಿರ್ದೇಶಕ ಸ್ಥಾನಗಳಿದ್ದು, ಜ.೨೫ರಂದು ಚುನಾವಣೆ ನಡೆದು ನ್ಯೂಕಾಲೋನಿ ನಿವಾಸಿ ಸಾಮಾನ್ಯ ಸ್ಥಾನದಿಂದ ಕೆಂಪಯ್ಯ, ಗೊಂದಿ ನಿವಾಸಿ ಜಯರಾಮ್ ಗೊಂದಿ, ಹುತ್ತಾ ಕಾಲೋನಿ ನಿವಾಸಿ ಬಿ.ಎಲ್ ನಾಗಭೂಷಣ, ಲೋಯರ್ ಹುತ್ತಾ ನಿವಾಸಿ ಪರಮೇಶ್, ಉಜ್ಜನಿಪುರ ನಿವಾಸಿ ಆರ್. ಪ್ರಕಾಶ್, ಹುತ್ತಾಕಾಲೋನಿ ನಿವಾಸಿ ಎನ್. ಶ್ರೀನಿವಾಸ್, ಮಲ್ಲೇಶ್ ಮತ್ತು ಹಿಂದುಳಿದ ವರ್ಗ ಎ ಸ್ಥಾನದಿಂದ ಹುತ್ತಾ ಕಾಲೋನಿ ನಿವಾಸಿ ಜೆ. ನಾಗಯ್ಯ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಕಬಳಿಕಟ್ಟೆ ನಿವಾಸಿ ಆರ್. ನಾಗೇಶ್, ಪರಿಶಿಷ್ಟ ಜಾತಿ ಸ್ಥಾನದಿಂದ ಜನ್ನಾಪುರ ಟಿ. ನಾರಾಯಣ, ಸಂಪತ್ ಕುಮಾರ್ ಹಾಗು ಮಹಿಳಾ ಸ್ಥಾನದಿಂದ ಹುತ್ತಾ ಕಾಲೋನಿ ನಿವಾಸಿ ಎಸ್. ಭಾಗ್ಯ, ಹೊಸಸಿದ್ದಾಪುರ ನಿವಾಸಿ ವಸಂತ ಆಯ್ಕೆಯಾಗಿದ್ದರು.
ಸಂಘದ ನೂತನ ಉಪಾಧ್ಯಕ್ಷ ಎನ್. ಶ್ರೀನಿವಾಸ್ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದಲ್ಲೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇನ್ನೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೆ ರೀತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಾದ ಬಿ.ಎಲ್ ನಾಗಭೂಷಣ ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ತಾಲೂಕು ಒಕ್ಕಲಿಗರ ಸಂಘದ ಮಹಾಪೋಷಕಿ ಶಾರದ ಅಪ್ಪಾಜಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ತಾಲೂಕು ಒಕ್ಕಲಿಗರ ಸಂಘ, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.
