ನೂತನ ರಂಗಮಂದಿರಕ್ಕೆ ನಿವೇಶನ, ಆರ್ಥಿಕ ನೆರವು ನೀಡಿ : ಕಲಾವಿದರಿಂದ ಶಾಸಕರಿಗೆ ಮನವಿ
ಭದ್ರಾವತಿ ನಗರದಲ್ಲಿ ರಂಗಮಂದಿರ ಪರಿಕಲ್ಪನೆಯಂತೆ ಯಾವುದೇ ಕಟ್ಟಡಗಳು ಇಲ್ಲದಿರುವುದರಿಂದ ಹೊಸ ರಂಗಮಂದಿರ ನಿರ್ಮಿಸುವುದು ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ನಿವೇಶನ ಹಾಗು ಆರ್ಥಿಕ ನೆರವು ಕಲ್ಪಿಸಿಕೊಡುವಂತೆ ಕಲಾವಿದರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಿದರು.
ಭದ್ರಾವತಿ : ನಗರದಲ್ಲಿ ರಂಗಮಂದಿರ ಪರಿಕಲ್ಪನೆಯಂತೆ ಯಾವುದೇ ಕಟ್ಟಡಗಳು ಇಲ್ಲದಿರುವುದರಿಂದ ಹೊಸ ರಂಗಮಂದಿರ ನಿರ್ಮಿಸುವುದು ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ನಿವೇಶನ ಹಾಗು ಆರ್ಥಿಕ ನೆರವು ಕಲ್ಪಿಸಿಕೊಡುವಂತೆ ಕಲಾವಿದರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಿದರು.
ಕಳೆದ ಕೆಲವು ದಿನಗಳ ಹಿಂದೆ ರಂಗ ಕಲಾವಿದರು ಸೇರಿದಂತೆ ನಗರದ ಎಲ್ಲಾ ಪ್ರಕಾರಗಳ ಕಲಾವಿದರು ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸಭೆ ನಡೆಸಿ ಸುಸಜ್ಜಿತವಾದ ರಂಗ ಮಂದಿರದ ಅಗತ್ಯತೆ ಕುರಿತು ಚರ್ಚೆ ನಡೆಸಿದ್ದರು. ಅಂತಿಮವಾಗಿ ಶಾಸಕರಿಗೆ ಮನವಿ ಸಲ್ಲಿಸುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ಶಾಸಕರ ಗೃಹ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಲಾವಿದರಾದ ತಮಟೆ ಜಗದೀಶ್, ಬಿ. ಕಮಲಾಕರ, ಜಿ. ದಿವಾಕರ, ಕೆ.ಎಸ್ ರವಿಕುಮಾರ್, ಬಿ. ಚಿದಾನಂದ, ಜಿ. ರವಿಕುಮಾರ್, ಎಂ.ಆರ್ ರೇವಣಪ್ಪ, ಕಾಂತಪ್ಪ, ಪ್ರಾನ್ಸಿಸ್, ಅಡವೀಶಯ್ಯ,
ಎಂ. ಮಂಜುಳ, ಬಿ. ಪ್ರವೀಣ್ ಕುಮಾರ್, ನಂದಿನಿ, ಶಿಲ್ಪ, ರತ್ನ, ರೇಣುಕ ಮತ್ತು ಇತರರು ಉಪಸ್ಥಿತರಿದ್ದರು.
