ಫೆ.೧೪ರಂದು ಸಪ್ತಶಕ್ತಿ ಸಂಗಮ `ಮಾತೆಯರ ಸಮಾವೇಶ'

    ಭದ್ರಾವತಿ: ನಗರದ ಕೇಶವಪುರ ಬಡಾವಣೆ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಫೆ.೧೪ರಂದು ಸಪ್ತಶಕ್ತಿ ಸಂಗಮ `ಮಾತೆಯರ ಸಮಾವೇಶ' ಮಧ್ಯಾಹ್ನ ೧.೪೫ಕ್ಕೆ ಹಮ್ಮಿಕೊಳ್ಳಲಾಗಿದೆ. 
    ನಗರಸಭೆ ಸದಸ್ಯೆ ಅನುಪಮ ಚನ್ನೇಶ್ ಅಧ್ಯಕ್ಷತೆವಹಿಸಲಿದ್ದು, ಶಿವಮೊಗ್ಗ ಬಾಲಗೋಕುಲ ಸಂಯೋಜಕಿ ಜ್ಯೋತಿ ಬಸವರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಂಗಭೂಮಿ ಕ್ಷೇತ್ರದ ಸಾಧಕಿ ನಂದಿನಿ ಮಲ್ಲಿಕಾರ್ಜುನ, ನೃತ್ಯ ಕ್ಷೇತ್ರದ ಸಾಧಕಿ ಪುಷ್ಪ ಕೃಷ್ಣಮೂರ್ತಿ ಮತ್ತು ಸಂಗೀತ ಕ್ಷೇತ್ರದ ಸಾಧಕಿ ಡಿ.ಎಸ್ ಗಾಯಿತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಡಿ. ಸವಿತ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.