ಸರ್ಕಾರಿ ಶಾಲೆಯಲ್ಲಿ ಕ್ಯಾನ್ಸರ್ ಅರಿವು ಕಾರ್ಯಕ್ರಮ

ಭದ್ರಾವತಿ ನಗರದ ನ್ಯೂಟೌನ್ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಬುಳ್ಳಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಯಾನ್ಸರ್  ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ : ನಗರದ ನ್ಯೂಟೌನ್ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಬುಳ್ಳಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಯಾನ್ಸರ್  ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಬುಳ್ಳಾಪುರ ಸುತ್ತಮುತ್ತಲಿನ ಮಹಿಳೆಯರಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಮೂಲಕ ಕುಟುಂಬ ಸದಸ್ಯರಲ್ಲಿ ಆರೋಗ್ಯದ ಜಾಗೃತಿವಹಿಸುವಂತೆ ಕರೆ ನೀಡಲಾಯಿತು. 
    ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ವೀಣಾ, ಸಂಸ್ಥೆಯ ಸಿಬ್ಬಂದಿಗಳು, ಒಕ್ಕೂಟದ ಪ್ರತಿನಿಧಿಗಳು, ಸಂಘದ ಸದಸ್ಯರು, ಮಕ್ಕಳು, ತಾಯಂದಿರು ಪಾಲ್ಗೊಂಡಿದ್ದರು.