ದರೋಡೆಗೆ ಯತ್ನಿಸುತ್ತಿದ್ದ ಯುವಕನ ಕಾಲಿಗೆ ಪೊಲೀಸರಿಂದ ಗುಂಡು : ಆಸ್ಪತ್ರೆಗೆ ದಾಖಲು
ಭದ್ರಾವತಿ: ತಾಲೂಕಿನ ಗೌರಾಪುರ ಗ್ರಾಮದ ಬಳಿ ದರೋಡೆ ಯತ್ನಿಸುತ್ತಿದ್ದ ಯುವಕನೋರ್ವನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಹಳೇನಗರದ ಮುಬಾರಕ್(೩೦) ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದ್ದು, ಈತನ ವಿರುದ್ಧ ಹಲವಾರು ದರೋಡೆ ಪ್ರಕರಣಗಳು ದಾಖಲಾಗಿದ್ದವು. ಈತನನ್ನು ಪೊಲೀಸರು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಸಿದ್ದು, ಮಾಹಿತಿ ತಿಳಿದ ತಕ್ಷಣ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ವೃತ್ತ ನಿರೀಕ್ಷಕಿ ನಾಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.